ಪೆರ್ಲ: ಎಣ್ಮಕಜೆ ಗ್ರಾ.ಪಂ.ನ ಹೆಡ್ ಕ್ಲಾರ್ಕ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ಜಗದೀಶ್ ಮಧೂರು ಅವರಿಗೆ ಗ್ರಾ.ಪಂ.ಆಡಳಿತ ಸಮಿತಿ.ಉದ್ಯೋಗಸ್ಥರು ಮತ್ತು ಸಹೋದ್ಯೋಗಿಗಳ ವತಿಯಿಂದ ವಿದಾಯ ಕೂಟ ಪಂಚಾಯತು ಸಭಾಂಗಣದಲ್ಲಿ ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ನಡೆ ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ರಮ್ಲ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಪಂ.ಕಾರ್ಯದರ್ಶಿ ಹಂಸಾ, ಪಂ.ಸದಸ್ಯರಾದ ನರಸಿಂಹ ಪೂಜಾರಿ, ಕುಸುಮಾವತೀ ಟೀಚರ್, ರೂಪವಾಣಿ ಆರ್. ಭಟ್, ರಾಧಾಕೃಷ್ಣ ನಾಯಕ್ ಶೇಣಿ, ಡಾ.ಫಾತಿಮತ್ ಹಂಸಾರ್,ಎನ್ ಆರ್ ಜಿ ಅಭಿಯಂತರ ನವಾಸ್ ಮತ್ರ್ಯ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ,ಸಹಾಯಕ ಕಾರ್ಯದರ್ಶಿ ಗಿರೀಶ್ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತರಾಗುತ್ತಿರುವ ಜಗದೀಶ್ ಅವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.