ಇಂದೋರ್: ಅಪರಿಚಿತ ಯುವತಿಯ ದೇಹದ ಭಾಗಗಳನ್ನು ತುಂಡರಿಸಿ, ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಇರಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಇಂದೋರ್: ಅಪರಿಚಿತ ಯುವತಿಯ ದೇಹದ ಭಾಗಗಳನ್ನು ತುಂಡರಿಸಿ, ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಇರಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮೃತರನ್ನು 20 ರಿಂದ 25 ವರ್ಷದ ಯುವತಿ ಎಂದು ಗುರುತಿಸಲಾಗಿದೆ.
ಯುವತಿಯ ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿ ದೇಹದ ಮೇಲ್ಭಾಗವನ್ನು ಟ್ರಾಲಿಯಲ್ಲಿ, ಸೊಂಟದ ಕೆಳಭಾಗವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿದ್ದಾರೆ. ಆದರೆ ಕೈ -ಕಾಲುಗಳು ಪತ್ತೆಯಾಗಿಲ್ಲ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಉಸ್ತುವಾರಿ ಸಂಜಯ್ ಶುಕ್ಲಾ ಹೇಳಿದ್ದಾರೆ.
ಯುವತಿಯನ್ನು ಬೇರೆಡೆ ಕೊಲೆ ಮಾಡಿ, ಶವವನ್ನು ಅನೇಕ ಭಾಗಗಳಾಗಿ ಕತ್ತರಿಸಿ ರೈಲಿನಲ್ಲಿ ಇರಿಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಬೇಡ್ಕರ್ ನಗರ-ಇಂದೋರ್‌ಗೆ ರೈಲು ಶನಿವಾರ ರಾತ್ರಿ ಪ್ರಯಾಣ ಬೆಳೆಸಿತ್ತು. ಈ ವೇಳೆ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ರೈಲನ್ನು ಸ್ವಚ್ಛಗೊಳಿಸುವಾಗ ಈ ಚೀಲಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಯುವತಿಯನ್ನು ಗುರುತಿಸುವ ಪ್ರಯತ್ನಗಳು ಮುಂದುವರಿದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.