HEALTH TIPS

ಕಾಸರಗೋಡು, ಕಣ್ಣೂರು ಮತ್ತು ವಡಗರ ಕ್ಷೇತ್ರಗಳಲ್ಲಿ ಸಿಪಿಎಂಗೆ ಭಾರಿ ಮತ ಕುಸಿತ: ಸುಧಾರಿಸಿದ ಎನ್ ಡಿಎ

              ಕಣ್ಣೂರು: ಕಣ್ಣೂರು, ಕಾಸರಗೋಡು, ವಡಗರ ಕ್ಷೇತ್ರಗಳಲ್ಲಿ ಸಿಪಿಎಂ ಭಾರೀ  ಮತಗಳನ್ನು ಕಳೆದುಕೊಂಡಿದೆ. ಇದೇ ವೇಳೆ ಎನ್ ಡಿಎ ಅಭ್ಯರ್ಥಿಗಳ ಮತಗಳಲ್ಲಿ ಭಾರೀ ಏರಿಕೆಯಾಗಿದೆ.

                ಕಣ್ಣೂರಿನ ಎನ್‍ಡಿಎ ಅಭ್ಯರ್ಥಿ ಸಿ. ರಘುನಾಥ್ ಅವರು 119876 ಮತಗಳನ್ನು ಪಡೆದರು. 2019ರಲ್ಲಿ ಸಿ.ಕೆ. ಪದ್ಮನಾಭನ್ ಇಲ್ಲಿ 68,509 ಮತಗಳನ್ನು ಪಡೆದಿದ್ದರು. ವಡಗರದಲ್ಲಿ ಎನ್ ಡಿಎ ಅಭ್ಯರ್ಥಿ ಸಿ.ಆರ್.ಪ್ರಪುÅಲ್ ಕೃಷ್ಣನ್ 1,11,979 ಮತಗಳನ್ನು ಪಡೆದಿದ್ದಾರೆ. 2019ರಲ್ಲಿ ವಿ.ಕೆ. ಸಜೀವ್ 80,128 ಮತಗಳನ್ನು ಪಡೆದಿದ್ದರು.

               ಕಾಸರಗೋಡು ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ 217669 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿಗಿಂತ 41620 ಮತಗಳು ಹೆಚ್ಚಳಗೊಂಡಿದೆ.

                ಮುಖ್ಯಮಂತ್ರಿಗಳ ಕ್ಷೇತ್ರವಾದ ಕಣ್ಣೂರಿನ ಧರ್ಮಡಂನಲ್ಲಿ ಸಿಪಿಎಂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮುಖ್ಯಮಂತ್ರಿಗಳ ಮತಗಟ್ಟೆ ಸೇರಿದಂತೆ ಇತರೆಡೆ ಎನ್‍ಡಿಎಗೆ ಮತ ಎರಡು ಪಟ್ಟು ಹೆಚ್ಚಿದೆ. ಎಲ್ಲಾ ಮಾಕ್ರ್ಸ್‍ವಾದಿ ಪಕ್ಷದ ಕೇಂದ್ರಗಳಲ್ಲಿ ಎನ್‍ಡಿಎ ಮತ್ತು ಯುಡಿಎಫ್ ಅಭ್ಯರ್ಥಿಗಳ ಪರವಾಗಿ ಭಾರಿ ಅಬ್ಬರದ ಹರಿವು ಕಂಡುಬಂದಿದೆ. ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಎಲ್‍ಡಿಎಫ್ 40 ಸಾವಿರಕ್ಕೂ ಹೆಚ್ಚು ಮತಗಳನ್ನು ಕಳೆದುಕೊಂಡಿದೆ.

                ವಡಗರ ಕ್ಷೇತ್ರದ ಭಾಗವಾಗಿರುವ ಕೂತುಪರಂಬ ಮತ್ತು ತಲಶ್ಶೇರಿ, ಕಾಸರಗೋಡು ಕ್ಷೇತ್ರಕ್ಕೆ ಸೇರಿದ ಪಯ್ಯನ್ನೂರು ಮತ್ತು ಕಲ್ಲ್ಯಶ್ಶೇರಿಯಲ್ಲಿ ಎಲ್‍ಡಿಎಫ್‍ಗೆ ಭಾರಿ ಮತ ನಷ್ಟವಾಗಿದೆ. ಅಲ್ಪ ಮುನ್ನಡೆ ಸಾಧಿಸಿದ ಧರ್ಮಡಂ ಮತ್ತು ಮಟ್ಟನ್ನೂರು ಹೊರತುಪಡಿಸಿ ಉಳಿದೆಲ್ಲ ಕಡೆ ಹಿನ್ನಡೆ ಕಂಡಿದೆ.

                ಕಣ್ಣೂರಿನ ಯುಡಿಎಫ್ ಅಭ್ಯರ್ಥಿ ಕೆ. ಸುಧಾಕರನ್ 1,12,239 ಮತಗಳ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ ರಾಜಮೋಹನ್ ಉಣ್ಣಿತ್ತಾನ್ 486801 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ವಡಗÀರದಲ್ಲಿ ಯುಡಿಎಫ್ ಅಭ್ಯರ್ಥಿ ಶಾಫಿ ಪರಂಬಿಲ್ 1,14,506 ಮತಗಳ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.

         ಕೋಝಿಕ್ಕೋಡಲ್ಲಿ ಮತ ಬಾಚಿದ ಬಿಜೆಪಿ: 

               ಕೋಝಿಕ್ಕೋಡ್: ಕೋಝಿಕ್ಕೋಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ ಹೆಚ್ಚಿದೆ. ಸಿಪಿಎಂ ಮತಗಳು ಕಡಮೆಯಾಗಿದೆ. ನಾಲ್ಕನೇ ಬಾರಿಗೆ ಎಂ.ಕೆ. ರಾಘವನ್ ಗೆದ್ದಿದ್ದಾರೆ. ರಾಘವನ್ 5,20,421 ಮತಗಳನ್ನು ಪಡೆಯುವ ಮೂಲಕ ಸಿಪಿಎಂನ ಎಳಮರಮ್ ಕರೀಂ ಅವರನ್ನು ಪರಾಭವಗೊಳಿಸಿದರು. ಎಳಮರಮ್ ಕರೀಂ ಅವರು 3,74,245 ಮತಗಳನ್ನು ಪಡೆದರು. ರಾಘವನ್ 1,46,176 ಮತಗಳ ಬಹುಮತ ಪಡೆದರು. ಎನ್‍ಡಿಎ ಅಭ್ಯರ್ಥಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ 1,80,666 ಮತಗಳನ್ನು ಪಡೆದರು. ಕಳೆದ ಚುನಾವಣೆಗಿಂತ ಬಿಜೆಪಿ 19,450 ಹೆಚ್ಚು ಮತಗಳನ್ನು ಹೆಚ್ಚು ಪಡೆದರೆ, ಸಿಪಿಎಂ ಈ ಬಾರಿ 33,974 ಕಡಮೆ ಮತಗಳನ್ನು ಪಡೆದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries