ತಿರುವನಂತಪುರಂ: ರಾಜ್ಯದಲ್ಲಿ ಇಂದಿನಿಂದ(ಗುರುವಾರ) ಕಲ್ಯಾಣ ಪಿಂಚಣಿ ವಿತರಣೆ ನಡೆಯಲಿದೆ. ಒಂದು ತಿಂಗಳ ಕಲ್ಯಾಣ ಪಿಂಚಣಿ ವಿತರಣೆಗೆ ಮೊತ್ತ ಮಂಜೂರಾಗಿದೆ.
ಕಲ್ಯಾಣ ಪಿಂಚಣಿ ವಿತರಣೆಗೆ 9,000 ಕೋಟಿ ಮೀಸಲಿಡಲಾಗಿದೆ. ಐದು ತಿಂಗಳ ಬಾಕಿ ಉಳಿದಿದೆ. ಫಲಾನುಭವಿಗಳಿಗೆ ತಲಾ 1600 ರೂ.ವಿತರಿಸಲಾಗುವುದು.
ಬ್ಯಾಂಕ್ ಖಾತೆ ಸಂಖ್ಯೆ ನೀಡಿದವರು ಖಾತೆಯ ಮೂಲಕ ಹಣ ಪಡೆಯುತ್ತಾರೆ. ಇನ್ನುಳಿದವರಿಗೆ ಸಹಕಾರ ಸಂಘಗಳ ಮೂಲಕ ಪಿಂಚಣಿಯನ್ನು ನೇರವಾಗಿ ಅವರ ಮನೆಗೆ ತಲುಪಿಸಲಾಗುವುದು.