ತಿರುವನಂತಪುರಂ: ರಾಜ್ಯ ಪೋಲೀಸ್ ಮುಖ್ಯಸ್ಥ ಶೇಖ್ ದರ್ವೇಶ್ ಸಾಹಿಬ್ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ. ಅವರು ಮುಂದಿನ ತಿಂಗಳು 30 ರಂದು ನಿವೃತ್ತರಾಗಲಿದ್ದರು.
ಸರ್ಕಾರಕ್ಕೆ ಅಗತ್ಯವಿರುವ ವ್ಯಕ್ತಿ ಶೇಖ್ ದರ್ವೇಶ್ ಸಾಹಿಬ್ ಎಂಬ ನಿರ್ಣಯದ ಆಧಾರದಲ್ಲಿ ಕ್ಯಾಬಿನೆಟ್ ಸಭೆ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಸೇವೆಯ ವಿಸ್ತರಣೆಯೊಂದಿಗೆ, ಅವರು ಜೂನ್ 2025 ರವರೆಗೆ ಮುಂದುವರಿಯಬಹುದು. ಪ್ರಸ್ತುತ ಸುಪ್ರೀಂ ಕೋರ್ಟ್ ಆದೇಶವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.