HEALTH TIPS

ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ!

 ತನ್ನ ನೋವ ನುಂಗಿ ಮಕ್ಕಳಿಗೆ ಪ್ರೀತಿ ಧಾರೆ ಎರೆಯುವ ತಂದೆಗೆ ಮಕ್ಕಳ ಭವಿಷ್ಯವೇ ಮುಖ್ಯವಾಗಿರುತ್ತದೆ. ತನಗಾಗಿ ಏನು ಮಾಡಿಕೊಳ್ಳದೇ ತನ್ನವರಿಗಾಗಿ ಸಮಾಜದಲ್ಲಿ ಹೋರಾಡುವ ಎಲ್ಲ ಅಪ್ಪಂದಿರಿಗೆ ಈ ದಿನ ಮೀಸಲಾಗಿದೆ. ಮಕ್ಕಳು ಮತ್ತು ಅಪ್ಪನ ನಡುವಿನ ಬಾಂಧವ್ಯದ ಸಂಕೇತವಾಗಿ ಈ ಭಾರಿ ಜೂನ್​ ತಿಂಗಳ 16ನೇ ತಾರೀಕಿನಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ.

1910 ರಲ್ಲಿ ಮೊದಲ ಬಾರಿಗೆ ತಂದೆಯ ದಿನವನ್ನು ಆಚರಿಸಲಾಯಿತು ಆದರೆ ಆರು ದಶಕಗಳ ನಂತರ ಅಧಿಕೃತವಾಗಿ ಈ ದಿನ ಘೋಷಣೆಯಾಯಿತು. ಜನರು ತಮ್ಮ ಜೀವನದಲ್ಲಿ ತಂದೆಯನ್ನು ಗೌರವಿಸಲು ಈ ದಿನವು ಯುಎಸ್ ನಾದ್ಯಂತ ಪ್ರಚಲಿತಗೊಂಡಿತು. ಆ ದಿನ ಉಡುಗೊರೆಗಳನ್ನು ನೀಡುವ ಮೂಲಕ ಅಥವಾ ತಮ್ಮ ಜೀವನದಲ್ಲಿ ಪುರುಷರನ್ನು ಗೌರವಿಸಿ ತಮ್ಮ ತಂದೆಯೊಂದಿಗೆ ಸಮಯ ಕಳೆಯುವ ಮೂಲಕ ಆಚರಣೆ ಮಾಡಲಾಗುತ್ತದೆ.

ಈ ಭಾರಿ ಅಂದರೆ 2024ರಲ್ಲಿ ತಂದೆಯ ದಿನವನ್ನು ಜೂನ್ 16 ರ ಭಾನುವಾರದಂದು ಆಚರಿಸಲಾಗುತ್ತದೆ. ಅಮೆರಿಕದಲ್ಲಿ ಜೂನ್ ತಿಂಗಳ ಮೂರನೇ ಭಾನುವಾರದಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. ಸ್ಪೇನ್​ ಮತ್ತು ಪೋರ್ಚುಗಲ್​ನಂತಹ ದೇಶಗಳು ಮಾರ್ಚ್​ 19ರಂದು ಸೇಂಟ್​ ಜೋಸೆಫ್​ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್​ನಲ್ಲಿ ಆಗಸ್ಟ್​ 8ರಂದು ಹಾಗೂ ಥೈಲಾಂಡ್​ನಲ್ಲಿ ಡಿಸೆಂಬರ್​ 5ರಂದು ಆಚರಿಸಲಾಗುತ್ತದೆ.

ತಂದೆಯ ದಿನದ ಇತಿಹಾಸ ಮತ್ತು ಮಹತ್ವ:

ತಂದೆಯ ದಿನವನ್ನು ತಾಯಂದಿರ ದಿನದಿಂದ ಸ್ಫೂರ್ತಿ ಪಡೆಯಲಾಯಿತು ಎಂದು ಹೇಳಲಾಗುತ್ತದೆ. ಆದರೆ ಯಾವುದೇ ಸ್ಪಷ್ಟ ದಾಖಲೆಗಳಿಲ್ಲ. 1910 ರಲ್ಲಿ ಮೊದಲ ಬಾರಿಗೆ ತಂದೆಯ ದಿನವನ್ನು ಆಚರಿಸಲಾಯಿತು ಬಳಿಕ 1914 ರ ವೇಳೆಗೆ ಅಧ್ಯಕ್ಷ ವುಡ್ರೊ ವಿಲ್ಸನ್ ಇದನ್ನು ಅಧಿಕೃತಗೊಳಿಸಿದರು. ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರಿಗೆ ಒಂದು ದಿನವನ್ನು ಮೀಸಲಿಟ್ಟ ನಂತರ, ಸ್ಪೋಕೇನ್ನ ಸೊನೊರಾ ಸ್ಮಾರ್ಟ್ ಡಾಡ್ ತಂದೆಯರಿಗೆ ಇದೇ ರೀತಿಯ ದಿನವನ್ನು ಆಚರಿಸಬೇಕು ಎಂದು ಕೊಂಡು ಈ ದಿನವನ್ನು ಆಚರಣೆ ತಂದರು ಎನ್ನಲಾಗಿದೆ.

ವರದಿಗಳ ಪ್ರಕಾರ, ಡಾಡ್ ಅವರನ್ನು 14 ಮಕ್ಕಳೊಂದಿಗೆ ವಿಧವೆಯೊಬ್ಬರು ಬೆಳೆಸಿದರು. ಆದ್ದರಿಂದ, ಅವಳು ಪಿತೃಗಳ ಸೇವೆ ಮಾಡಲು ಮತ್ತು ಗೌರವಿಸಲು ನಿರ್ಧರಿಸಿದಳು. ತರುವಾಯ ಡಾಡ್ ಸಮುದಾಯದ ಬೆಂಬಲ ಗಳಿಸಿದರು, ಬಳಿಕ ಇಜೂನ್ 19, 1910 ರಂದು ಮೊದಲ ಬಾರಿಗೆ ತಂದೆಯ ದಿನವನ್ನು ಆಚರಿಸಲಾಯಿತು. ಇದು ಕ್ರಮೇಣ ಯುಎಸ್ ನ ಉಳಿದ ಭಾಗಗಳಿಗೆ ಹರಡಿತು.

1924 ರಲ್ಲಿ, ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಈ ದಿನವನ್ನು ಆಚರಿಸಲು ಇತರ ರಾಜ್ಯಗಳಿಗೆ ಸಲಹೆ ನೀಡಿದರು. 1966 ರಲ್ಲಿ, ಅಧ್ಯಕ್ಷ ಲಿಂಡನ್ ಬಿ ಜಾನ್ಸನ್ ತಂದೆಯರನ್ನು ಗೌರವಿಸಲು ಅಧ್ಯಕ್ಷೀಯ ಘೋಷಣೆಯನ್ನು ಮಾಡಿದರು ಮತ್ತು ಜೂನ್ ತಿಂಗಳ ಮೂರನೇ ಭಾನುವಾರವನ್ನು ತಂದೆಯ ದಿನವನ್ನು ಆಚರಿಸಲು ಗೊತ್ತುಪಡಿಸಿದರು. ವಿಶೇಷವೆಂದರೆ, 1972 ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಕಾನೂನಿಗೆ ಸಹಿ ಹಾಕಿದ ನಂತರ ಯುಎಸ್ನಲ್ಲಿ ಫಾದರ್ಸ್ ಡೇ ಶಾಶ್ವತ ರಜಾದಿನವಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries