ಕೋಝಿಕ್ಕೋಡ್: ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ. ಮಾನಂತವಾಡಿಯಿಂದ ಕೋಝಿಕ್ಕೋಡ್‍ಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ 23 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಕಿರುಕುಳ ಮುಂದುವರಿದಂತೆ ಮಹಿಳೆ ಆತನಿಗೆ ಥಳಿಸಿದ್ದಾರೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಮೀಪದಲ್ಲಿದ್ದ ವ್ಯಕ್ತಿ ಯುವತಿ ಮೇಲೆ ಲೈಂಗಿಕ ನಿರಂತರ ಕಿರುಕುಳ ಎಸಗಿದ್ದಾನೆ. ಕಿರುಕುಳ ತಾಳಲಾರದೆ ಯುವತಿ ಆತನಿಗೆ ಕಪಾಳಮೋಕ್ಷ ಮಾಡಿ ಬಸ್ ಕಂಡಕ್ಟರ್ ಹಾಗೂ ಚಾಲಕನಿಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಚಾಲಕ ಪೋಲೀಸರಿಗೆ ಮಾಹಿತಿ ನೀಡಿದರು.
ಈ ಬಗ್ಗೆ ಪೆÇಲೀಸರು ಮಾಹಿತಿ ಕೇಳಿದರೂ ಮಹಿಳೆ ದೂರು ನೀಡದ ಕಾರಣ ಪ್ರಕರಣ ದಾಖಲುಗೊಳಿಸಿಲ್ಲ. ತಕ್ಷಣ ಶಿಕ್ಷೆ ನೀಡಿದ ಕಾರಣ ದೂರು ನೀಡಿಲ್ಲ ಎಂದು ಮಹಿಳೆ ಉತ್ತರಿಸಿದರು.