ಕುಂಬಳೆ: ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಕುಂಬಳೆ ಶಾಖೆಯ ಸಕ್ರಿಯ ಸದಸ್ಯ ಮಾಧವ ಕೆ.ಕುಂಬಳೆ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ವತಿಯಿಂದ ಎರಡು ಲಕ್ಷ ರೂ.ಗಳ ಸಹಾಯಧನ ಗುರುವಾರ ಅವರ ಮನೆಗೆ ತೆರಳಿ ಸಂಸ್ಥೆಯ ಉಪಾಧ್ಯಕ್ಷ ಶಂ.ನಾ. ಖಂಡಿಗೆ ಹಸ್ತಾಂತರಿಸಿದರು.
ನಿರ್ದೇಶಕರುಗಳಾದ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಪದ್ಮರಾಜ ಪಟ್ಟಾಜೆ, ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ., ಕುಂಬಳೆ ಗ್ರಾಮಪಂಚಾಯಿತಿ ಸದಸ್ಯೆ ಪ್ರೇಮಾವತಿ, ನೀರ್ಚಾಲು ಶಾಖಾ ವ್ಯವಸ್ಥಾಪಕ ಗಣೇಶ್, ಕುಂಬಳೆ ಶಾಖಾ ವ್ಯವಸ್ಥಾಪಕ ಕಿರಣ್ ಕೂಡ್ಲು, ಸುರೇಶ್ ಶೆಟ್ಟಿ ಪರಂಕಿಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.