ಕಾಸರಗೋಡು : ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನವನ್ನು ಚೆಮ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕರ್ ನಿರ್ವಹಿಸಿದರು.
ಕಾಸರಗೋಡು ವಿಭಾಗದ ಅರಣ್ಯಾಧಿಕಾರಿ ಕೆ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. "ಬದಲಾಗುತ್ತಿರುವ ಪರಿಸರ ಮತ್ತು ಬದಲಾಗದ ಮನುಷ್ಯ" ಎಂಬ ವಿಷಯದ ಕುರಿತು ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಸದಸ್ಯ ಪ್ರೊ.ವಿ.ಗೋಪಿನಾಥನ್ ಪ್ರಧಾನ ಭಾಷಣ ಮಾಡಿದರು.
ಗ್ರಾ.ಪಂ.ಸದಸ್ಯ ಚಂದ್ರಶೇಖರನ್ ಕುಳಂಗರ ಕಾಸರಗೋಡು ಅರಣ್ಯ ರೇಂಜ್ ಫ್ಲೆöÊಯಿಂಗ್ ಸ್ಕೆ÷್ವÃಡ್ ಅಧಿಕಾರಿ ರತೀಶನ್, ಹೊಜದುರ್ಗ ವಲಯ ಅರಣ್ಯಾಧಿಕಾರಿ ಸೊಲೊಮನ್ ಟಿ.ಜಾರ್ಜ್, ಕಾಸರಗೋಡು ಸಾಮಾಜಿಕ ಅರಣ್ಯ ವಲಯಾಧಿಕಾರಿ ಕೆ.ಗಿರೀಶ್, ಶಾಲಾ ಪಿ.ಟಿ.ಎ ಅಧ್ಯಕ್ಷ ಕಾರ್ವರ್ಣನ್, ಎಸ್.ಎಂ.ಸಿ ಅಧ್ಯಕ್ಷ ಮಣಿಕಂಠನ್, ಜಿಎಚ್‌ಎಸ್‌ಎಸ್ ಮುಖ್ಯಶಿಕ್ಷಕ ಇಬ್ರಾಹಿಂ ಖಲೀಲ್, ಮದರ್ ಪಿಟಿಎ ಅಧ್ಯಕ್ಷೆ ಕೆ.ಶ್ಯಾಮಲಾ, ಎನ್‌ಸಿಸಿ ಅಧಿಕಾರಿ ಕೆ.ಪಿ.ರತೀಶ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ.ಜಯಲಕ್ಷ್ಮಿ ಸ್ವಾಗತಿಸಿದರು.