HEALTH TIPS

ಭಾರತದ ಅತಿದೊಡ್ಡ ಐಪಿಒ ಬಿಡುಗಡೆಗೆ ಸಿದ್ಧತೆ: ಸೆಬಿಗೆ ದಾಖಲೆ ಸಲ್ಲಿಸಿದ ಹ್ಯುಂಡೈ ಮೋಟಾರ್

              ವದೆಹಲಿದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈನ ಭಾರತೀಯ ಅಂಗವಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್​ಎಂಐಎಲ್​) ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಪ್ರಾರಂಭಿಸಲು ಸೆಬಿಗೆ ಪ್ರಾಥಮಿಕ ದಾಖಲೆಗಳನ್ನು ಸಲ್ಲಿಸಿದೆ.

                ಎಲ್​ಐಸಿಯ ಐಪಿಒದಲ್ಲಿ 21,000 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಾಟ ಮಾಡಲಾಗಿತ್ತು. ಈಗ ಬರುತ್ತಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಐಪಿಒ ಈ ಮೊತ್ತವನ್ನು ಮೀರಿಸಿ, ಭಾರತದ ಅತಿದೊಡ್ಡ ಐಪಿಒ ಆಗಲಿದೆ.

           ಹ್ಯುಂಡೈ ಮೋಟಾರ್ ಐಪಿಒದಲ್ಲಿ 14,21,94,700 ಇಕ್ವಿಟಿ ಷೇರುಗಳನ್ನು ಮಾರಾಟಕ್ಕೆ ಒದಗಿಸಲಾಗುತ್ತಿದೆ.

               ಹ್ಯುಂಡೈ ಮೋಟಾರ್ ಕಂಪನಿಯು ಈ ಐಪಿಒ ಮೂಲಕ ಕನಿಷ್ಠ 3 ಶತಕೋಟಿ ಡಾಲರ್​ (ಅಂದಾಜು 25,000 ಕೋಟಿ ರೂ.) ಸಂಗ್ರಹಿಸಲು ಉದ್ದೇಶಿಸಿದೆ. ಈ ಹಣ ಸಂಗ್ರಹದಿಂದ ಕಂಪನಿಯ ಪಾಲು 15-20 ರಷ್ಟು ಕಡಿಮೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

         ಮಾರುತಿ ಸುಜುಕಿ ಇಂಡಿಯಾದ ನಂತರ ಭಾರತದಲ್ಲಿ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್. 2003ರಲ್ಲಿ ಮಾರುತಿ ಸುಜುಕಿಯು ಷೇರು ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಇದಾದ ಎರಡು ದಶಕಗಳ ನಂತರ ವಾಹನ ತಯಾರಕರು ಬಿಡುಗಡೆ ಮಾಡುತ್ತಿರುವ ಐಪಿಒ ಇದಾಗಿದೆ. ಈ ವಾರದ ಆರಂಭದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಓಲಾ ಎಲೆಕ್ಟ್ರಿಕ್ ಐಪಿಒ ಮೂಲಕ ಹಣವನ್ನು ಸಂಗ್ರಹಿಸಲು ಸೆಬಿಯ ಅನುಮತಿಯನ್ನು ಪಡೆದುಕೊಂಡಿದೆ.

               ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ 1996 ರಲ್ಲಿ ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರಸ್ತುತ 13 ಮಾದರಿಗಳ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮೇ 2024 ರಲ್ಲಿ 63,551 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ 59,601 ವಾಹನಗಳನ್ನು ಮಾರಾಟ ಮಾಡಿದ್ದು, ಇದಕ್ಕೆ ಹೋಲಿಸಿದರೆ ಈ ವರ್ಷ ಶೇ. 7 ಹೆಚ್ಚಳವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries