ಕೊಚ್ಚಿ: ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ. ಮುವಾಟ್ಟುಪುಳ-ಎರನಾಕುಳಂ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಫಿಡವಿಟ್ ಸಲ್ಲಿಸಿರುವ ಸರ್ಕಾರದ ಕ್ರಮವನ್ನು ನ್ಯಾಯಾಲಯ ಟೀಕಿಸಿದೆ.
ಪ್ರಕರಣಗಳ ನಿರ್ವಹಣೆಯಲ್ಲಿ ಸÀರ್ಕಾರ ನಿರಾಸಕ್ತಿ ತೋರುತ್ತಿದೆ ಎಂದು ನ್ಯಾಯಾಲಯ ಮೌಖಿಕವಾಗಿ ಪ್ರಸ್ತಾಪಿಸಿದೆ.
ಮುವಾಟ್ಟುಪುಳ-ಎರನಾಕುಳಂ ರಸ್ತೆಯ ರಾಷ್ಟ್ರೀಕರಣಕ್ಕೆ ಸಂಬಂಧಿಸಿದಂತೆ 2018 ರಿಂದ ಬಾಕಿ ಉಳಿದಿರುವ ಪ್ರಕರಣದಲ್ಲಿ ಸರ್ಕಾರವು ದಾಖಲೆಗಳನ್ನು ಮತ್ತು ಪ್ರತಿವಾದವನ್ನು ಸಲ್ಲಿಸದಿರುವುದನ್ನು ನ್ಯಾಯಾಲಯವು ಪ್ರಶ್ನಿಸಿದೆ. ಹೈಕೋರ್ಟ್ ನ್ನು ಗೌರವಿಸಬೇಕು ಮತ್ತು ಮಾತುಗಳನ್ನಾಲಿಸಬೇಕು. ಉತ್ತರಿಸಿ ಅಫಿಡವಿಟ್ ಅನ್ನು ಸಮಯಕ್ಕೆ ಏಕೆ ಸಲ್ಲಿಸಲಿಲ್ಲ ಎಂದು ನ್ಯಾಯಾಲಯವು ಕೇಳಿದೆ. ಅಲ್ಲದೇ ರಾಜ್ಯದ ಸರ್ವೋಚ್ಚ ನ್ಯಾಯಾಲಯಕ್ಕೆ ಸರಕಾರ ಅಗೌರವ ತೋರುತ್ತಿರುವುದು ನೋವು ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಲವು ಬಾರಿ ಪ್ರಮಾಣ ಪತ್ರ ಸಲ್ಲಿಸಲು ನಿರ್ದೇಶಿಸಲಾಗಿತ್ತು.
ಸರ್ಕಾರ ಸಮಯ ವಿಸ್ತರಣೆ ಕೇಳಿದ್ದರೂ. ನಿನ್ನೆ ಪ್ರಕರಣದ ವಿಚಾರಣೆ ನಡೆದಾಗ ಕಾಲಾವಕಾಶ ವಿಸ್ತರಿಸುವಂತೆ ಕೋರಿ ಕೋರ್ಟ್ ನ್ನು ಕೆರಳಿಸಿತ್ತು.