HEALTH TIPS

ಬಿಜಿತ್ ಅವರದ್ದು ದೇವರ ಕೈ: ವೈರ್ ಆದ ಕಂಡಕ್ಟರ್

                   ಶಾಸ್ತಮಕೋಟ: ಚಲಿಸ್ತುದ್ದ ಬಸ್ಸಿನಿಂದ ಹಠಾತ್ ಕೆಳಬೀಳಲಿದ್ದ ಪ್ರಯಾಣಿಕನಾದ  ಯುವಕನ ಪ್ರಾಣ ಉಳಿದಿದ್ದು ಬಿಜಿತ್ ಕೈಯಿಂದ!

                    ದೇವರ ಕೈಗಳು ಅಥವಾ ಅದ್ಭುತ ಕೈಗಳು ಎಂದು ವಿವರಿಸಬಹುದು.

                 ಆದರೆ, ಮತ್ತೆ ಜೀವನಕ್ಕೆ ಮರಳಿದ ಯುವಕ ಇನ್ನೂ ಅಜ್ಞಾತವಾಗಿಯೇ ಉಳಿದಿದ್ದಾನೆ. ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಬಗ್ಗೆ ವ್ಯಾಪಕ ವೀಡಿಯೋಗಳೂ ಜಾಲತಾಣದಲ್ಲಿ ಕುತೂಹಲಕರವಾಗಿ ಹರಿದಾಡಿದೆ. 

                ಮನ್ರೋತುರುತ್ ಕಿತಾಪ್ರಮ್ ಮಟ್ಟೆಲ್ ಹೌಸ್ ನ ಬಿಜಿತ್ ಲಾಲ್ (33), ಚವರ-ಪಂದಳಂ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ನಿಂದ ಹೊರಗೆಸೆಯಲ್ಪಡಲಿದ್ದ ಸುನೀಲ್ ಎಂಬ ಪ್ರಯಾಣಿಕನನ್ನು ಹಿಡಿದು ಜೀವ ಉಳಿಸಿದ ಘಟನಾವಳಿ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಇದರಿಂದ ಅವರು ಇಂದು ಎಲ್ಲೆಡೆ ಹೀರೋ ಆಗಿದ್ದಾರೆ. 

             ಕರಾಳಿ ಮುಕ್ ಎಂಬಲ್ಲಿಂದ ಬಸ್ ಹತ್ತಿ ಶಾಸ್ತಮಕೋಟಕ್ಕೆ ಟಿಕೆಟ್ ಪಡೆದಿದ್ದ ಯುವಕ ಉಳಿದ ಹಣ ಪಡೆಯಲು ಕ್ಯಾಬ್ ಹಿಡಿದ ತಕ್ಷಣ ಆಯತಪ್ಪಿ ಬಾಗಿಲಿಗೆ ಬಿದ್ದಿದ್ದಾನೆ. ಯುವಕನ ದೇಹ ಸ್ಪರ್ಶಿಸುತ್ತಿರುವಂತೆ ಬಸ್ ನ ಬಾಗಿಲೂ ಹಠಾತ್ ತೆರೆದುಕೊಂಡಿತು. ಅಷ್ಟರಲ್ಲಿ ಸಮಯೋಚಿತವಾಗಿ ಬಿಜಿತ್ ತನ್ನ ಬಲಗೈಯಿಂದ ಆತನನ್ನು ಹಿಡಿದು ರಕ್ಷಿಸಿದರು. ಬಸ್ಸಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯಾವಳಿ ಹೊರಬಿದ್ದಿದೆ.

              ಸಂತೋಷ ಇರುವುದು ವೈರಲ್ ಆಗುವುದರಲ್ಲಿ ಅಲ್ಲ ಜೀವ ಉಳಿಸುವುದರಲ್ಲಿ ಎಂದು ಬಿಜಿತ್ ಲಾಲ್ ಹೇಳಿದ್ದಾರೆ. ವಿಡಿಯೋ ದೃಶ್ಯಾವಳಿ ನೋಡಿ ಘಟನೆಯ ವಿಷಯ ತಿಳಿದ ಹಲವರು ಕಂಡಕ್ಟರ್‍ರನ್ನು ಅಭಿನಂದಿಸಲು ಬಸ್‍ಗಾಗಿ ಕಾಯುತ್ತಿದ್ದಾರೆ. ಕುನ್ನತ್ತೂರು ಮೋಟಾರು ವಾಹನ ಜಾರಿ ನಿರೀಕ್ಷಕ ಶಹಜಹಾನ್ ಅವರು ಭರ್ಣಿಕಾವ್‍ನಲ್ಲಿ ಬಿಜಿತ್ ಅವರನ್ನು ಖುದ್ದು ಭೇಟಿಯಾಗಿ ಸನ್ಮಾನಿಸಿದರು. ಎಎಂವಿ ಇನ್ಸ್ ಪೆಕ್ಟರ್ ಶ್ರೀಕುಮಾರ್, ಕೊಟ್ಟಾರಕ್ಕರ ಸಬ್ ಆರ್ ಟಿಒ ಮೋಟಾರ್ ವೆಹಿಕಲ್ ಇನ್ಸ್ ಪೆಕ್ಟರ್ ರಾಮ್ ಜಿ ಕರಣ್ ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries