ಬದಿಯಡ್ಕ: ಬದಿಯಡ್ಕದ ಸಮತಾ ಸಾಹಿತ್ಯ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಕನ್ನಡಹೋರಾಟಗಾರ, ಖ್ಯಾತ ಕವಿ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಜನ್ಮದಿನೋತ್ಸವ ಮತ್ತು ಸಂಸ್ಮರಣಾ ಸಮಾರಂಭ ಜೂ. 8ರಂದು ಮಧ್ಯಾಹ್ನ 2.30ಕ್ಕೆ ಬದಿಯಡ್ಕ ಮೇಲಿನ ಪೇಟೆಯ ಹಿರಿಯ ನಾಗರಿಕರ ವಿಶ್ರಾಂತ ಗೃಹ'ಹಗಲು ಮನೆ'ಯಲ್ಲಿ ಜರಗಲಿದೆ.
ನಿವೃತ್ತ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಡಾ. ಬೇ.ಸಿ ಗೋಪಾಲಕೃಷ್ಣ ಅವರು "ಡಾ. ಕಯ್ಯಾರ ಅವರ ಬದುಕು ಮತ್ತು ಬರಹ'ವಿಷಯದಲ್ಲಿ ಉಪನ್ಯಾಸ ನೀಡುವರು. ಈ ಸಂದರ್ಭ ಡಾ. ಕಯ್ಯಾರ ಅವರ ಕಾವ್ಯಗಳ ವಾಚನ, ಗಾಯನ ಕಾರ್ಯಕ್ರಮ ನಡೆಯುವುದು.