ಕುಂಬಳೆ: ನಾವು ಹೇಗಿದ್ದೇವೆ, ಹೇಗಿರಬೇಕು ಎನ್ನುವ ದಾರಿಯನ್ನು ಪುಸ್ತಕಗಳು ನಮಗೆ ತೋರಿಸುವ ದಾರಿದೀಪಗಳಾಗಿವೆ. ಪುಸ್ತಕ ಓದು ಮಾತ್ರವೇ ನಮ್ಮನ್ನು ಸಮರ್ಥವಾಗಿ ಬೆಳೆಸುವುದಕ್ಕೆ ಸಾಧ್ಯ ಎಂದು ಮಾಯಿಪ್ಪಾಡಿ ಡಯಟ್ ಕೇಂದ್ರದ ಉಪನ್ಯಾಸಕ ಗಿರೀಶ್ ಬಾಬು ಅಭಿಪ್ರಾಯಪಟ್ಟರು.
ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ನಡೆದ ವಿವಿಧ ಸಂಘಗಳ ಉದ್ಘಾಟನೆ ನಿರ್ವಹಿಸಿ ಅವರು ಮಾತನಾಡಿದರು.
ಶಾಲಾ ಮುಖ್ಯಸ್ಥೆ ಬೀನಾ ಸಿ.ಟಿ.ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕರಾದ ರಾಘವ ಎಂ.ಎನ್., ಜನಾರ್ದನ ಟಿ.ವಿ., ಅಹಮ್ಮದ್ ನಿಜಾರ್ ಕೆ.ಸಿ., ಅಕ್ಬರ್ ಎನ್., ಸಿಂಧು, ಮಾತೃಸಮಿತಿ ಅಧ್ಯಕ್ಷೆ ಫೌಸಿಯಾ ಹಾಗ|ಊ ವಿವಿಧ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಶುಭಹಾರೈಸಿದರು.
ವಿದ್ಯಾ|ರ್ಥಿಗಳು ಈ ಸಂದರ್ಭ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಸ್ತುತ ವರ್ಷದ ವಿವಿಧ ಸಂಘಗಳ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕನ್ನಡ ಭಾಷಾ ಸಂಘ ಹಾಗೂ ವಿದ್ಯಾರಂಗ ಜಂಟಿಯಾಗಿ ಹಮ್ಮಿಕೊಂಡ ಪುಸ್ತಕ ಆಸ್ವಾಧನಾ ಟಿಪ್ಪಣಿ ಸ್ಪಧೆರ್|ಯಲ್ಲಿ ವಿಜೇತರಾದ ವೈಷ್ಣವಿ ಹಾಗೂ ನವ್ಯಶ್ರೀ ಅವರಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ಎಸ್.ಆರ್.ಜಿ. ಸಂಚಾಲಕ ಅಹಮ್ಮದ್ ನಿಸಾರ್ ಸ್ವಾಗತಿಸಿ, ಯು.ಪಿ.ವಿಭಾಗದ ಎಸ್.ಆರ್.ಜಿ.ಪ್ರತಿನಿಧಿ ನಿಸಾರ್ ವಂದಿಸಿದರು.