ವಾಷಿಂಗ್ಟನ್: ಆಗ್ನೇಯ ಅಮೆರಿಕದ ಅಲಬಾಮಾ ರಾಜ್ಯದಲ್ಲಿ ವೃದ್ಧ ದಂಪತಿಯ ಹತ್ಯೆ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಲಾದ ವ್ಯಕ್ತಿಗೆ ಮಾರಕ ಚುಚ್ಚುಮದ್ದು ನೀಡುವ ಮೂಲಕ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.
ವಾಷಿಂಗ್ಟನ್: ಆಗ್ನೇಯ ಅಮೆರಿಕದ ಅಲಬಾಮಾ ರಾಜ್ಯದಲ್ಲಿ ವೃದ್ಧ ದಂಪತಿಯ ಹತ್ಯೆ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಲಾದ ವ್ಯಕ್ತಿಗೆ ಮಾರಕ ಚುಚ್ಚುಮದ್ದು ನೀಡುವ ಮೂಲಕ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.
2004ರ ಜೂನ್ 24ರಂದು ಬರ್ಮಿಂಗ್ಹಾಮ್ ಬಳಿಯ ಗುಯಿನ್ ನಗರದಲ್ಲಿ 87 ವರ್ಷದ ಫ್ಲಾಯ್ಡ್ ಹಿಲ್ ಮತ್ತು ಅವರ ಪತ್ನಿ 72 ವರ್ಷದ ವೇರಾ ಹಿಲ್ ವಾಸವಿದ್ದ ಮನೆಗೆ ನುಗ್ಗಿದ್ದ ಜೇಮಿ ಮಿಲ್ಸ್ ಎಂಬಾತ ಸುತ್ತಿಗೆ, ಮಚ್ಚಿನಿಂದ ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಬಳಿಕ ಮನೆಯನ್ನು ದರೋಡೆಗೈದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಕೊಲೆ ನಡೆಸಿದ ಎರಡು ದಶಕಗಳ ಬಳಿಕ ಜೇಮಿ ಮಿಲ್ಸ್ ತನ್ನ ಘೋರ ಅಪರಾಧಗಳಿಗೆ ಬೆಲೆ ಪಾವತಿಸಿದ್ದಾನೆ' ಎಂದು ಅಲಬಾಮಾದ ಗವರ್ನರ್ ಕೇಯ್ ಲೆವಿ ಪ್ರತಿಕ್ರಿಯಿಸಿದ್ದಾರೆ.