ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇವುಗಳನ್ನು ಬಳಸಲು ನಾವು ಪ್ರತಿದಿನ ಚಾರ್ಜ್ ಮಾಡಬೇಕಾಗುತ್ತದೆ. ಹೀಗೆ ಫೋನ್ ಅನ್ನು ಚಾರ್ಜ್ ಮಾಡುವಾಗ ಕೆಲ ತಪ್ಪುಗಳನ್ನು ಮಾಡಿದರೆ ಅನೇಕ ತೊಂದರೆಗಳು ಉಂಟಾಗಬಹುದು. ಮೊಬೈಲ್ ಸ್ಫೋಟಗೊಳ್ಳುವ ಅಪಾಯವೂ ಇದೆ.
ಗಂಭೀರವಾದ ಗಾಯ ಅಥವಾ ಸಾವುಕೂಡ ಸಂಭವಿಸಬಹುದು. ತಪ್ಪಾಗಿ ಚಾರ್ಜ್ ಮಾಡಿದರೆ ಸ್ಮಾರ್ಟ್‌ಫೋನ್ ಹಾನಿಗೊಳಗಾಗಬಹುದು. ಇದಲ್ಲದೆ, ಬ್ಯಾಟರಿಯ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಕೆಲವು ತಪ್ಪುಗಳಿಂದಾಗಿ ಫೋನ್ ಬಿಸಿಯಾಗುವ ಸಮಸ್ಯೆಯೂ ಉದ್ಭವಿಸುತ್ತದೆ. ಹಾಗಾದರೆ ನಾವು ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ.
ಚಾರ್ಜರ್ ಸ್ವಿಚ್ ಆಫ್ ಮಾಡಿ
ಫೋನ್ ಚಾರ್ಜ್ ಆದಾಗ ಜನರು ಫೋನ್ ಅನ್ನು ಮಾತ್ರ ತೆಗೆಯುತ್ತಾರೆ. ಆದರೆ ಚಾರ್ಜರ್ ಅನ್ನು ಅನ್ನು ಅಲ್ಲೇ ಬಿಟ್ಟು ಪ್ಲಗ್ ಕೂಡ ಆಫ್ ಮಾಡುವುದಿಲ್ಲ. ಇದು ಚಾರ್ಜರ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸಬಹುದು. ಆದ್ದರಿಂದ, ಫೋನ್ ಅನ್ನು ಚಾರ್ಜ್ ಮಾಡಿದ ನಂತರ, ಸ್ವಿಚ್ ಆಫ್ ಮಾಡಿ. ಹಾಗೆಯೆ ಸ್ವಿಚ್ ಆನ್ ಮಾಡಿ ಚಾರ್ಜಿಂಗ್‌ನಲ್ಲಿ ಫೋನ್ ಬಿಡುವ ಅಭ್ಯಾಸ ಜನರಲ್ಲಿದೆ. ಫೋನ್ ಚಾರ್ಜ್ ಆದ ನಂತರವೂ ಚಾರ್ಜರ್ ಅನ್ನು ಕನೆಕ್ಟ್ ಮಾಡುವುದರಿಂದ ಬ್ಯಾಟರಿ ಬೇಗ ಹಾಳಾಗುವ ಅಪಾಯವಿದೆ.
ಸ್ಫೋಟ ಸಂಭವಿಸಬಹುದು
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಕಂಪನಿಗಳು ಮೊಬೈಲ್ಗಳೊಂದಿಗೆ ಚಾರ್ಜರ್‌ಗಳನ್ನು ಒದಗಿಸುವುದಿಲ್ಲ. ಜನರು ಪ್ರತ್ಯೇಕ ಚಾರ್ಜರ್ ಖರೀದಿಸಬೇಕು. ಈ ಚಾರ್ಜರ್‌ಗಳು ಸ್ವಲ್ಪ ದುಬಾರಿಯಾಗಿರುವುದರಿಂದ ಕೆಲವರು ಲೋಕಲ್ ಚಾರ್ಜರ್‌ಗಳನ್ನು ಖರೀದಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿ, ಏಕೆಂದರೆ, ಇದರಿಂದ ಫೋನ್ ಸ್ಫೋಟಗೊಳ್ಳುವ ಅಪಾಯವಿದೆ. ಆದ್ದರಿಂದ, ಯಾವಾಗಲೂ ಆ ಫೋನ್ಗೆ ನಿಗದಿ ಪಡಿಸಿದ ಚಾರ್ಜರ್ ಅನ್ನು ಮಾತ್ರ ಬಳಸಬೇಕು.
ಇತರೆ ಫೋನ್ ಚಾರ್ಜರ್
ಇತರೆ ಫೋನ್‌ನ ಚಾರ್ಜರ್‌ನೊಂದಿಗೆ ನಿಮ್ಮ ಫೋನ್ ಚಾರ್ಜ್ ಮಾಡುವಾಗ ತುಂಬಾ ನಿಧಾನವಾಗಿ ಚಾರ್ಜ್ ಆಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಏಕೆಂದರೆ ನೀವು ಬಳಸುತ್ತಿರುವ ಚಾರ್ಜರ್ ನಿಮ್ಮ ಫೋನ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಫೋನ್‌ನೊಂದಿಗೆ ಒದಗಿಸಲಾದ ಚಾರ್ಜರ್‌ನೊಂದಿಗೆ ಅದನ್ನು ಚಾರ್ಜ್ ಮಾಡಿ. ನಿಮ್ಮ ಫೋನ್ 20W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಭಾವಿಸೋಣ, ಆದರೆ, ನೀವು ಕನೆಕ್ಟ್ ಮಾಡಿರುವ ಚಾರ್ಜರ್ 120W ಅಥವಾ 65W ನದ್ದಾಗಿದ್ದರೆ ಫೋನ್ ಬಿಸಿಯಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.