ಕಾಸರಗೋಡು: ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಅಕ್ರಮಗಳನ್ನು ಪರಿಶೀಲಿಸಲು ವಿವಿಧ ಸಂಸ್ಥೆಗಳಲ್ಲಿ ಎನ್‍ಫೋರ್ಸ್‍ಮೆಂಟ್ ನಡೆಸಿದ ತಪಾಸಣೆಯಲ್ಲಿ ವಿವಿಧ ರೀತಿಯ ಅಪರಾಧಗಳನ್ನು ಪತ್ತೆಹಚ್ಚಿದೆ.
ಕಾಞಂಗಾಡಿನ ಕ್ಲಿನಿಕ್ ಒಂದರಲ್ಲಿ ಜೈವಿಕ ವಿಘಟನೀಯ ತ್ಯಾಜ್ಯವನ್ನು ಸುಡುವ ಯಂತ್ರ ಬಳಸಿ ವಿಲೇವಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಆ ಸಂಸ್ಥೆಯ ಮಾಲೀಕರಿಂದ ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು 10000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಅಜನೂರಿನ ಅಪಾರ್ಟ್‍ಮೆಂಟ್‍ನಲ್ಲಿ ಸುಧಾರಿತ ಇನ್ಸಿನರೇಟರ್ ಬಳಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ 5 ಸಾವಿರ ರೂ. ದಂಡ ವಿಧಿಸಲಾಯಿತು. ಮಲಿನ ನೀರನ್ನು ಬಯಲು ಮತ್ತು ಪಕ್ಕದ ಹೊಲಗಳಿಗೆ ಹರಿಯಬಿಟ್ಟ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ತೆರೆದ ಸಥಳದಲ್ಲಿ ಸಉರಿಯಲಾದ ಪ್ರಕರಣಕ್ಕೆ ಸಂಬಂಧಿಸಿ.ಅಜಾನೂರಿನಲ್ಲಿರುವ ಕ್ವಾರ್ಟರ್ಸ್ ಮಾಲಕಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ನೀಲೇಶ್ವರಂ ನಗರಸಭೆಯ ವಿವಿಧ ಸ್ಥಳಗಳಲ್ಲಿ ತಪಾಸಣೆಯ ಸಂದರ್ಭ ತ್ಯಾಜ್ಯ ನಿರ್ವಹಣೆಯಲ್ಲಿ ಲೋಪವೆಸಗಿದ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಕಟ್ಟಡಗಳಿಗೆ ತಲಾ 5,000 ರೂ. ಸ್ಥಳದಲ್ಲೇ ದಂಡ ವಿಧಿಸಲಾಯಿತು. ತಪಾಸಣೆಯಲ್ಲಿ ಜಾರಿ ದಳದ ನಾಯಕ ಮಹಮ್ಮದ್ ಮದನಿ, ಸ್ಕ್ವಾಡ್ ಸದಸ್ಯರಾದ ಅಮಿಷಾ ಚಂದ್ರನ್, ಬಿಜು ಅಣ್ಣೂರ್, ಫಾಝಿಲ್ ಇ.ಕೆ ಪಾಲ್ಗೊಮಡಿದ್ದರು.