ಕಾಸರಗೋಡು: ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ರಾಜ್‍ಮೋಹನ್ ಉಣ್ಣಿತ್ತಾನ್ ಅವರಿಗೆ ವಿಜೇತರ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾಣಾಧಿಕಾರಿ ಕೆ. ಇನ್ಬಾಶೇಖರ್ ಹಸ್ತಾಂತರಿಸಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಸಬರಮತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್‍ಮೋಹನ್ ಉಣ್ಣಿತ್ತಾನ್ ಅವರ ಮುಖ್ಯ ಚುನಾವಣಾ ಏಜೆಂಟ್ ವಕೀಲ ಬಿ.ಎಂ.ಜಮಾಲ್ ಪಟೇಲ್, ಏಜೆಂಟ್ ಎಂ. ಕುಂಜಂಬು ನಾಯರ್, ಅರ್ಜುನನ್ ತಾಯಲಂಗಡಿ ಮತ್ತು ಹರೀಶ್ ಬಿ ನಂಬಿಯಾರ್ ಉಪಸ್ಥಿತರಿದ್ದರು.