ಕಾಸರಗೋಡು: ರಸ್ತೆಗೆ ಅಡ್ಡ ಓಡಿದ ಕಾಡುಕೋಣ ಡಿಕ್ಕಿಯಾಗಿ ಕಾರು ಜಖಂಗೊಂಡಿದ್ದು, ಕಾರು ಚಲಾಯಿಸುತ್ತಿದ್ದ ಆದೂರು ಪೊಲೀಸ್ ಠಾಣೆ ಎಎಸ್‍ಐ ರಾಝನ್ ಪವಾಡಸದೃಶ ರಈತಿಯಲ್ಲಿ ಪಾರಾಗಿದ್ದಾರೆ.
ಶುಕ್ರವಾರ ನಸುಕಿಗೆ ಘಟನೆ ನಡೆದಿದೆ. ಬೆಂಗಲೂರಿನಿಂದ ಆಗಮಿಸಿದ ಪುತ್ರಿಯನ್ನು ಬೋವಿಕ್ಕಾನದ ಬಸ್ ನಿಲ್ದಾಣದಿಂದ ಕರೆತರಲು ಕಾರಿನಲ್ಲಿ ಸಂಚರಿಸುವ ಮಧ್ಯೆಚಿಪ್ಲಿಕಯ ಎಂಬಲ್ಲಿ ಕಾರಿಗೆ ಕಾಡುಕೋಣವೊಂದು ಡಿಕ್ಕಿಯಾಗಿದೆ. ಇದರಿಂದ ಕಾರಿನ ಎದುರಿನ ಗಾಜು ಒಡೆದು, ಬೋನೆಟ್ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಪಲ್ಟಿಯಾಗದಿರುವುದರಿಂದ ಭಾರೀ ದುರಂತ ತಪ್ಪಿದೆ. ಚಿಪ್ಲಿಕಯ ಪ್ರದೇಶದಲ್ಲಿ ರಾತ್ರಿ ವೇಳೆ ವನ್ಯಮೃಗಗಳ ಹಾವಳಿ ಹೆಚ್ಚಾಗಿದ್ದು, ಈ ಹಿಂದೆ ಹಲವು ವಾಹನ ಅಪಘಾತಕ್ಕೀಡಾಗಿದೆ.