ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮ ರಕ್ಷಣಾ ಪಡೆ(ವಿಡಿಜಿ) ಸಿಬ್ಬಂದಿಗೆ ಶೂಟಿಂಗ್ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮ ರಕ್ಷಣಾ ಪಡೆ(ವಿಡಿಜಿ) ಸಿಬ್ಬಂದಿಗೆ ಶೂಟಿಂಗ್ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಶಿಬಿರ ಆಯೋಜಿಸಿದ್ದು, ಈ ಶಿಬಿರವು ಒಂದು ವಾರ ಇರಲಿದೆ.
'ವಿಡಿಜಿ ಸಿಬ್ಬಂದಿ ವೃತ್ತಿಪರವಾಗಿ ತರಬೇತಿ ಪಡೆಯದಿದ್ದರೂ ಸ್ವಯಂ ಮತ್ತು ಸಮುದಾಯ ರಕ್ಷಣೆಗೆ ಬದ್ಧರಾಗಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ. ಕಣಿವೆ ಭಾಗದ ಸಂದಿಗ್ಧ ಪ್ರದೇಶಗಳಲ್ಲಿ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವವರ ಹೆಡೆಮುರಿ ಕಟ್ಟಲು ವಿಡಿಜಿ ಪಡೆಯು ಅತ್ಯಂತ ಪರಿಣಾಮಕಾರಿ ಸಂಘಟನೆಯಾಗಿದೆ. ಹಾಗಾಗಿ, ವಿಡಿಜಿ ಸಿಬ್ಬಂದಿಯ ಕೌಶಲ್ಯ ವರ್ಧನೆಗೆ ಈ ತರಬೇತಿ ಶಿಬಿರ ಆಯೋಜಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.