HEALTH TIPS

ವಿದ್ಯಾರ್ಥಿ ವೀಸಾ ಬೇಡಿಕೆ ಪೂರೈಸಿದ ಭಾರತದ ಯುಎಸ್​ ಮಿಷನ್:ಎರಿಕ್ ಗಾರ್ಸೆಟ್ಟಿ

          ವದೆಹಲಿ: ಅಮೆರಿಕಾದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ, ಅಗತ್ಯ ಕೌಶಲ್ಯಗಳನ್ನು ಒದಗಿಸಲಾಗುತ್ತಿದೆ. ಇದರಲ್ಲಿ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಶಿಕ್ಷಣದ ನಂತರ ವಿಶ್ವದೆಲ್ಲೆಡೆ ತಮ್ಮ ಪ್ರಚಂಡ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಭಾರತದಲ್ಲಿನ ಅಮೆರಿಕಾ ರಾಯಭಾರಿ ಎರಿಕ್ ಗಾರ್ಸೆಟ್ಟಿ ತಿಳಿಸಿದರು.

           ನವದೆಹಲಿಯಲ್ಲಿ ಕಾನ್ಸುಲರ್ ಟೀಮ್ ಇಂಡಿಯಾ ಗುರುವಾರ(ಜೂ.13)ತನ್ನ 8ನೇ ವಾರ್ಷಿಕ ವಿದ್ಯಾರ್ಥಿ ವೀಸಾ ದಿನದಂದು ಆಯೋಜಿಸಿದ್ದ ಸಮಾರಂಭದಲ್ಲಿ 3900 ವಿದ್ಯಾರ್ಥಿ ವೀಸಾ ಅರ್ಜಿದಾರರಿಗೆ ಶುಭ ಕೋರಿ ಮಾತನಾಡಿದ ಅವರು, ವಿದ್ಯಾರ್ಥಿ ವೀಸಾ ದಿನಕ್ಕಾಗಿ ಪ್ರಬಲ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಿಷನ್ ಇಂಡಿಯಾ ತನ್ನ ಬದ್ಧತೆ ಪ್ರದರ್ಶಿಸಿದೆ. ಯುನೈಟೆಡ್ ಸ್ಟೇಟ್ಸ್‌ ಜೊತೆ ಬೆಳೆಯುತ್ತಿರುವ ಅಮೆರಿಕಾದ ಶೈಕ್ಷಣಿಕ ಸಂಬಂಧಗಳಿಗೆ ಇದು ಪೂರಕವಾಗಲಿದೆ ಎಂದು ಹೇಳಿದರು.

            ಮಿಷನ್ ಸದಸ್ಯರು ಮತ್ತು ಎಜುಕೇಷನ್​ ಯುಎಸ್​ಎ ಸಹೋದ್ಯೋಗಿಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅರ್ಜಿದಾರರೊಂದಿಗೆ ಸದಾ ಸಂವಹನ ನಡೆಸುತ್ತಿರುವುದು ಸರಿಯಾದ ಕ್ರಮವಾಗಿದೆ ಎಂದು ತಿಳಿಸಿದರು.

           ವಿದ್ಯಾರ್ಥಿ ಪಡೆದುಕೊಳ್ಳುವ ಜ್ಞಾನ, ಕೌಶಲ್ಯಗಳು ಅವಕಾಶ ಸಿಕ್ಕಾಗ ಸಾಮರ್ಥ್ಯ ಪ್ರದರ್ಶಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾರತದ ರಾಯಭಾರಿಯಂತೆ ತಯಾರಾಗಬೇಕು. ನಾವು ಒಟ್ಟಾಗಿ ಅಮೆರಿಕಾ- ಭಾರತ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ಎರಿಕ್ ಗಾರ್ಸೆಟ್ಟಿ ವಿವರಿಸಿದರು.

            ಮಿನಿಸ್ಟರ್‌ ಕೌನ್ಸಲರ್‌ ಫಾರ್‌ ಕೌನ್ಸಲರ್‌ ಅಫೇರ್ಸ್‌ನ ರಸೆಲ್ ಬ್ರೌನ್ ಮಾತನಾಡಿ, ಈ ವರ್ಷ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯುಎಸ್​ಗೆ ತೆರಳಲು ಸಿದ್ಧರಾಗಿರುವುದರಿಂದ ವಿದೇಶಾಂಗ ಇಲಾಖೆ ಮತ್ತು ನಮ್ಮ ಎಜುಕೇಷನ್​ ಯುಎಸ್​ ವಿದ್ಯಾರ್ಥಿ ಋತುವಿನ ಉದ್ದಕ್ಕೂ ವಿದ್ಯಾರ್ಥಿ ವೀಸಾ ಅರ್ಜಿದಾರರನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

            ಕಳೆದ ಮೂರು ವರ್ಷಗಳಲ್ಲಿ ಅಮೆರಿಕದಲ್ಲಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆ ಹೆಚ್ಚಿದೆ. ಈ ಅಭೂತಪೂರ್ವ ಬೆಳವಣಿಗೆಯು 2021 ಮತ್ತು 2023 ರ ನಡುವೆ ಇತರ ಎಲ್ಲಾ ಬಗೆಯ ವೀಸಾಗಳ ಬೇಡಿಕೆಯಲ್ಲಿ 400 ಪ್ರತಿಶತ ಏರಿಕೆಯನ್ನು ಮಿಷನ್ ಪೂರೈಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಅಮೆರಿಕಾ ಸಹಕರಿಸುತ್ತಿದೆ ಎಂದರು.

              ಭಾರತೀಯ ವಿದ್ಯಾರ್ಥಿಗಳಿಗೆ ಯುನೈಟೆಡ್ ಸ್ಟೇಟ್ಸ್ ಉನ್ನತ ಶಿಕ್ಷಣ ತಾಣವಾಗಿದೆ. ಅಧ್ಯಯನಗಳ ಪ್ರಕಾರ 69 ಪ್ರತಿಶತ ಭಾರತೀಯ ವಿದ್ಯಾರ್ಥಿಗಳು ಇತರ ಯಾವುದೇ ದೇಶಗಳಿಗಿಂತ ಅಮೆರಿಕಾಗೆ ಆದ್ಯತೆ ನೀಡುತ್ತಾರೆ ಎಂದರು

           ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣಿಸಲು ತಯಾರಿ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳು bit.ly/EdUSAIndiaPDO24 ಗೆ ಭೇಟಿ ನೀಡುವ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಧಿಕೃತ ಮಾಹಿತಿಯ ಮೂಲವಾದ ಎಜುಕೇಷನ್​ ಯುಎಸ್​ಆಯೋಜಿಸಿರುವ ನಿರ್ಗಮನ-ಪೂರ್ವ ಓರಿಯೆಂಟೇಶನ್ (ಪಿಡಿಒ) ಗೆ ಸೇರಿಕೊಳ್ಳುವ ಮೂಲಕ ವಿದ್ಯಾರ್ಥಿ ವೀಸಾ ಪ್ರಕ್ರಿಯೆಯ ಬಗ್ಗೆ ತಿಳಿಯಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries