ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ 2023ನೇ ಸಾಲಿನ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪ್ರಶಸ್ತಿಗಳು ನಗದು ಹಾಗೂ ಲಕಗಳನ್ನು ಒಳಗೊಂಡಿವೆ.
ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿಗೆ ಚಂದ್ರಮತಿ ಸೋಂದಾ ಅವರ 'ದುಪಡಿ', ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಬಿ.
ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) ಪ್ರಶಸ್ತಿಗೆ ನೂತನ ದೋಶೆಟ್ಟಿ ಅವರ 'ಸ್ವರ್ಗದೊಂದಿಗೆ ಅನುಸಂಧಾನ', ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ಪ್ರಶಸ್ತಿಗೆ ಸುಮಾ ರಮೇಶ್ ಅವರ 'ಹಚ್ಚೆ ದಿನ್', ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ) ಪ್ರಶಸ್ತಿಗೆ ರಾಧಾ ಕುಲಕರ್ಣಿ ಅವರ 'ಏರಿ ರಂಗಮಂಚ ತೋರಿ ಈ ಪ್ರಪಂಚ', ಇಂದಿರಾ ವಾಣಿರಾವ್ (ನಾಟಕ) ಪ್ರಶಸ್ತಿಗೆ ಕಾವ್ಯಾ ಕಡಮೆ ಅವರ 'ಸಂಜೀವಿನಿ ಸ್ಟೋರ್ಸ್', ಜಯಮ್ಮ ಕರಿಯಣ್ಣ (ಸಂಶೋಧನೆ) ಪ್ರಶಸ್ತಿಗೆ ಲೀಲಾ ವಾಸುದೇವ್ ಅವರ 'ಮೊರಸು ಒಕ್ಕಲಿಗರ ಪ್ರಧಾನ ಸಂಪ್ರದಾಯಗಳು' ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ತ್ರಿವೇಣಿ ದತ್ತಿನಿಧಿ ಅಡಿ ಸುಧಾ ಆಡುಕಳ ಅವರ 'ನೀಲಿ ಮತ್ತು ಸೇಬು' (ಪ್ರಥಮ), ಫೌಝಿಯಾ ಸಲೀಂ ಅವರ 'ನೀ ದೂರ ಹೋದಾಗ' (ದ್ವಿತೀಯ) ಹಾಗೂ ಸಿಂಧುಚಂದ್ರ ಅವರ 'ಚೂರು ಚಂದ್ರ ಮೂರು ಕಿರಣ' (ತೃತೀಯ) ಬಹುಮಾನಗಳಿಗೆ ಪಾತ್ರವಾಗಿವೆ. ಉಷಾ. ಪಿ.ರೈ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಶೋಭಾ ನಾಯಕ ಅವರ 'ಶಯ್ಯಗೃಹದ ಸುದ್ದಿಗಳು', ನಿರುಪಮಾ ಕಥಾ ಪ್ರಶಸ್ತಿಗೆ ಡಿಜಿಟಲ್ ಮಾಧ್ಯಮದಲ್ಲಿ ಮಾಲತಿ ಹೆಗಡೆ ಅವರ 'ಪಲ್ಲಟ', ಮುದ್ರಣ ಮಾಧ್ಯಮದಲ್ಲಿ ಮಂಜುಳಾ ಗೋನಾಳ ಅವರ 'ಬಿದಿರು ಮಳೆ ಸೇವೆ ಕಥೆಗಳು', ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿಗೆ ಕಾತ್ಯಾಯಿನಿ ಕುಂಜಿಬೆಟ್ಟು ಅವರ 'ನಕ್ಷತ್ರ ನಕ್ಕ ರಾತ್ರಿ', ಶ್ರೀಲೇಖಾ (ಕಾವ್ಯ ಪ್ರಶಸ್ತಿ) ಪ್ರಶಸ್ತಿಗೆ ದೇವಿಕಾ ನಾಗೇಶ್ ಅವರ 'ಮೌನ ಹೊದ್ದವಳು' ಕೃತಿ ಆಯ್ಕೆಯಾಗಿವೆ.
ಸಮಗ್ರ ಸಾಧನೆಗೆ ಶಿಕ್ಷಕಿ ಅಥವಾ ಲೇಖಕಿಗೆ ನೀಡುವ ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ ಮಂಜುಳಾ ಹಿರೇಮಠ, ಪ್ರಕಾಶಕಿ ಅಥವಾ ಲೇಖಕಿಗೆ ನೀಡುವ ಪ್ರೇಮಾ ಭಟ್ ಮತ್ತು ಎ.ಎಸ್. ಭಟ್ಟ ಪ್ರಶಸ್ತಿಗೆ ಅಕ್ಷತಾ ಹುಂಚದಕಟ್ಟೆಯವರ ಅಹರ್ನಿಶಿ ಪ್ರಕಾಶನ ಭಾಜನವಾಗಿದೆ. 23ರಂದು ನಗರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ತಿಳಿಸಿದ್ದಾರೆ.