ಕಣ್ಣೂರು: ಚುನಾವಣಾ ಗೆಲುವಿನ ನಂತರ ಮುಸ್ಲಿಂ ಲೀಗ್‌ನ ಮುಖಂಡರು ಮಹಿಳಾ ಕಾರ್ಯಕರ್ತರಿಗೆ ರೋಡ್ ಶೋ ಮತ್ತು ಪ್ರದರ್ಶನಕ್ಕೆ ನಿಷೇಧ ಹೇರಿದ್ದಾರೆ.
ಶಾಫಿ ಪರಂಬಿಲ್ ವಿಜಯೋತ್ಸವದಲ್ಲಿ ಭಾಗವಹಿಸಬೇಡಿ ಎಂಬ ಲೀಗ್ ನಾಯಕನ ಧ್ವನಿ ಸಂದೇಶವೂ ಹೊರಬಿದ್ದಿದೆ. ಲೀಗ್‌ನ ಕೂತುಪರಂಬ ಕ್ಷೇತ್ರದ ಕಾರ್ಯದರ್ಶಿ ಶಾಹುಲ್ ಹಮೀದ್ ಮಹಿಳಾ ಕಾರ್ಯಕರ್ತರನ್ನು ನಿಷೇಧಿಸಿದ್ದಾರೆ. ಇಂದು ಪಾನೂರಿನಲ್ಲಿ ಶಫಿ ಅವರ ರೋಡ್ ಶೋ ಹಿನ್ನೆಲೆಯಲ್ಲಾಗಿದೆ.
ನಿಯೋಜಿತ ಸಂಸದರ ಸ್ವಾಗತ ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಯಕರ್ತೆಯರು ಸೀಮಿತರಾಗಿ ಇರಬೇಕು ಹಾಗೂ ಅತಿಯಾದ ಸಂಭ್ರಮಾಚರಣೆ ಬೇಡ, ಶುಭಾಶಯ ಕೋರಿದರೆ ಸಾಕು ಎಂದು ಆಡಿಯೋ ಸಂದೇಶದಲ್ಲಿ ಹೇಳಲಾಗಿದೆ. ಯಾವುದೇ ಧಾರ್ಮಿಕ ನಿರ್ಬಂಧಕ್ಕೆ ಅವಕಾಶವಿಲ್ಲ, ಲೀಗ್‌ಗೆ ಆಕ್ಷೇಪ ಬಾರದ ರೀತಿಯಲ್ಲಿ ಆಚರಣೆ ಮಾಡಬೇಕು, ಶಿಸ್ತು ಪಾಲಿಸಬೇಕು ಮತ್ತು ಇತರ ಪಕ್ಷಗಳ ಮಹಿಳಾ ಕಾರ್ಯಕರ್ತರಂತೆ ಮಹಿಳಾ ಕಾರ್ಯಕರ್ತರು ಸಂಭ್ರಮಿಸಬಾರದು.
ಮತ ಎಣಿಕೆ ದಿನ ವಡಗÀರದಲ್ಲಿ ಮಹಿಳಾ ಲೀಗ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ. ಅದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಇದೀಗ ನಾಯಕನ ವಾಯ್ಸ್ ಮೆಸೇಜ್ ಬಂದಿದ್ದು, ಅವರನ್ನು ರೋಡ್ ಶೋನಿಂದ ನಿಷೇಧಿಸಲಾಗಿದೆ.