ಪೆಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತರೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ತಮ್ಮ ಸ್ನೇಹಿತನ ಜೊತೆಗೆ ಪತ್ರಕರ್ತ ಖಲೀಲ್ ಜಿಬ್ರಾನ್ ಅವರು ಕಾರಿನಲ್ಲಿ ತಮ್ಮ ಮನೆಗೆ ಹೊರಟಿದ್ದರು.
ಈ ವೇಳೆ ಖೈಬರ್ ಜಿಲ್ಲೆಯ ಲಂಡಿ ಕೋಟಲ್ ಎಂಬಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಕಾರನ್ನು ಅಡ್ಡಗಟ್ಟಿದರು. ಬಳಿಕ ಜಿಬ್ರಾನ್ ಅವರನ್ನು ಕಾರಿನಿಂದ ಹೊರಗೆಳೆದು, ಈ ಕೃತ್ಯವೆಸಗಿದ್ದಾರೆ. ಜಿಬ್ರಾನ್ ಅವರ ಜೊತೆಗಿದ್ದ ಸ್ನೇಹಿತ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಬ್ರಾನ್ ಅವರಿಗೆ ಭಯೋತ್ಪಾದಕರಿಂದ ಆಗ್ಗಾಗ್ಗೆ ಬೆದರಿಕೆಯ ಕರೆಗಳು ಬರುತ್ತಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಬ್ರಾನ್ ಅವರ ಹತ್ಯೆ ಖಂಡಿಸಿ, ಪತ್ರಕರ್ತರು ಖೈಬರ್-ಪಾಕ್-ಅಫ್ಗಾನ್ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಕೃತ್ಯವೆಸಗಿದವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದರು.