ಕಾಸರಗೋಡು: ಚೆಮ್ಮನಾಡ್ ಕೋಳಿಯಡ್ಕದಲ್ಲಿ ನಿರ್ಮಿಸಿದ ನೂತನ ಜಿಲ್ಲಾ ಪುಟಬಾಲ್ ಅಕಾಡೆಮಿ ಕಟ್ಟಡವನ್ನು ನಿನ್ನೆ ಶಾಸಕ ಅಡ್ವ. ಸಿಎಚ್ ಕುಂಜಂಬು ಉದ್ಘಾಟಿಸಿದರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಚೆಮ್ಮನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕರ್ ಮುಖ್ಯ ಅತಿಥಿಯಾಗಿದ್ದರು.
ಚೆಮ್ಮನಾಡು ಗ್ರಾಮ ಪಂಚಾಯಿತಿ ಸದಸ್ಯ ಇ. ಮನೋಜ್ ಕುಮಾರ್, ರಾಜ್ಯ ಕ್ರೀಡಾ ಪರಿಷತ್ತಿನ ಪ್ರತಿನಿಧಿ ಟಿ.ವಿ.ಬಾಲನ್, ಜಿಲ್ಲಾ ಕ್ರೀಡಾ ಪರಿಷತ್ತಿನ ಕಾರ್ಯಕಾರಿ ಸದಸ್ಯ ಪಿ.ಅನಿಲ್, ಜಿಲ್ಲಾ ಕ್ರೀಡಾ ಮಂಡಳಿಯ ಕಾರ್ಯಕಾರಿ ಸದಸ್ಯರಾದ ಪಲ್ಲಂ ನಾರಾಯಣನ್, ಟಿ.ವಿ.ಕೃಷ್ಣನ್, ಜಿಲ್ಲಾ ಕ್ರೀಡಾಧಿಕಾರಿ ಸುದೀಪ್ ಬೋಸ್ ಎಂ.ಎಸ್.ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಕಾರ್ಯದರ್ಶಿ ಕೆ.ವಿ.ಸುರೇಂದ್ರನ್ ಸ್ವಾಗತಿಸಿ, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಉಪಾಧ್ಯಕ್ಷ ಪಿ.ಪಿ.ಅಶೋಕನ್ ಮಾಸ್ತರ್ ವಂದಿಸಿದರು.
ಸಾರ್ವಜನಿಕ ವಲಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ 2020-21ರ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸಿಕೊಂಡು ಚೆಮ್ಮನಾಡ್ ಗ್ರಾಮ ಪಂಚಾಯಿತಿಯ ಕೋಳಿಯಡ್ಕ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಹಸ್ತಾಂತರಿಸಲಾದ ಸ್ಪೋಟ್ರ್ಸ್ ಅಮಿನಿಟಿ ಸೆಂಟರ್‍ನಲ್ಲಿ ಜಿಲ್ಲಾ ಕ್ರೀಡಾ ಕೌನ್ಸಿಲ್ ನಲ್ಲಿ ಜಿಲ್ಲಾ ಅಥ್ಲೆಟಿಕ್ ಅಕಾಡೆಮಿಯನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲಾಯಿತು. ನಂತರ ಜಿಲ್ಲಾ ಕ್ರೀಡಾ ಮಂಡಳಿಯ ಆಡಳಿತ ಮಂಡಳಿಯ ನಿರಂತರ ಮಧ್ಯಪ್ರವೇಶದ ಅಂಗವಾಗಿ ಜಿಲ್ಲಾ ಫುಟ್ಬಾಲ್ ಅಕಾಡೆಮಿ ಸಾಕಾರಗೊಂಡಿದೆ. ಪ್ರಸ್ತುತ ಕಾಸರಗೋಡು, ಕಣ್ಣೂರು, ವಯನಾಡು ಮತ್ತು ತಿರುವನಂತಪುರಂ ಜಿಲ್ಲೆಗಳಿಂದ ಶಾಲೆಯ ಪ್ಲಸ್ 1 ತರಗತಿಗಳಲ್ಲಿ ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ಆಯ್ಕೆ ಟ್ರಯಲ್ಸ್ ನಡೆಸಿ ಆಯ್ಕೆಯಾದ 14 ಕ್ರೀಡಾಪಟುಗಳಿಗೆ ಅಕಾಡೆಮಿಗೆ ಪ್ರವೇಶ ನೀಡಲಾಗಿದೆ. ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ಫುಟ್ಬಾಲ್ ತರಬೇತುದಾರರ ಪೂರ್ಣ ಸಮಯದ ಸೇವೆಗಳು ಅಕಾಡೆಮಿಯಲ್ಲಿ ಲಭ್ಯವಿರುತ್ತವೆ.