ಕೊಚ್ಚಿ: ಕೇರಳದ ಪ್ರಮುಖ ಶಕ್ತಿಕೇಂದ್ರ ಕೊಚ್ಚಿಯ ಚೋಟಾನಿಕ್ಕರ ಭಗವತೀ ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ ಅಗ್ನಿಅಕಸ್ಮಿಕದಿಂದ ನ್ಯವೇದ್ಯ ತಯಾರಿ ಕೊಠಡಿಯ ಮೇಲ್ಚಾವಣಿಗೆ ಭಾರಿ ಹಾನಿಯುಂಟಾಗಿದೆ.
ನೈವೇದ್ಯ ತಯಾರಿ ಮಧ್ಯೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿತ್ತು. ತಕ್ಷಣ ದೇವಾಲಯದ ಅರ್ಚಕವೃಂದ, ನೌಕರರು ನೈವೇದ್ಯ ಕೊಠಡಿಗೆ ಧಾವಿಸಿ ನೀರು ಹಾಯಿಸುವ ಮೂಲಕ ಬೆಂಕಿಶಮನಗೊಳಿಸಿರುವುದರಿಂದ ಭಾರಿ ದುರಂತ ತಪ್ಪಿದೆ. ಬೆಳಗ್ಗಿನ ಪೂಜೆಗೆ ಹೆಚ್ಚಿನ ಸಂಖ್ಯೆಯಯಲ್ಲಿ ಭಕ್ತಾದಿಗಳು ಬಂದು ಸಎರಿದ್ದ ಸಂದರ್ಭ ಅಗ್ನಿ ಅನಾಹುತ ಸಂಭವಿಸಿದ್ದು, ಇದರಿಂದ ಭಕ್ತಾದಿಗಳು ಗೊಂದಲಕ್ಕೀಡಾಗಿದ್ದರು. ನಂತರ ಗರ್ಭಗುಡಿ ಬಾಗಿಲು ಮುಚ್ಚಿ, ಪುಣ್ಯಾಹ ಕಾರ್ಯ ನೆರವೇರಿಸಿದ ನಂತರ ಪೂಜಾವಿಧಿ ಮುಂದುವರಇಸಲಾಯಿತು.