ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾದ ಕೆಲವೇ ದಿನಗಳಲ್ಲಿ ಎನ್‌ಡಿಎ ಮಿತ್ರಪಕ್ಷ ಜನತಾದಳ (ಯು) ಬಿಹಾರಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ ಎಂದು 'ಪಿಟಿಐ' ವರದಿ ಮಾಡಿದೆ.

ಸಂಜಯ್ ಝಾ ಅವರನ್ನು ಇಂದು ಜೆಡಿಯು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ್ದ 'ಅಗ್ನಿವೀರ್' ಯೋಜನೆ ಕುರಿತು ಮರುಚಿಂತನೆ ನಡೆಸಬೇಕು ಎಂದು ಜೆಡಿಯು ಈಚೆಗೆ ಬೇಡಿಕೆ ಮಂಡಿಸಿತ್ತು. ಈ ಮೂಲಕ ಹೊಸ ಜನಾದೇಶದ ಬಳಿಕ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರದ ಸ್ವರೂಪ ಯಾವ ರೀತಿ ಇರಬಹುದು ಎಂಬ ಸೂಚನೆಯನ್ನು ನೀಡಿತ್ತು.
ನೂತನ ಸರ್ಕಾರ ರಚನೆಯಲ್ಲಿ ಜೆಡಿಯು ಪಾತ್ರ ನಿರ್ಣಾಯಕವಾಗಿದೆ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಆಪ್ತರಾದ ಕೆ.ಸಿ.ತ್ಯಾಗಿ, ಅಗ್ನಿವೀರ್ ಯೋಜನೆಯ ಮರುಪರಿಶೀಲನೆಗೆ ಪಕ್ಷ ಬೇಡಿಕೆ ಮಂಡಿಸಲಿದೆ ಎಂದು ತಿಳಿಸಿದ್ದರು.
ಒಂದು ವೇಳೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಾದರೇ, ಎನ್‌ಡಿಎ ಮಿತ್ರಪಕ್ಷವಾದ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ) ಕೂಡ ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.