HEALTH TIPS

ದೇಶದಲ್ಲೇ ಮೊದಲು: ಇ-ಪೋಸ್ಟ್ ವ್ಯವಸ್ಥೆ ಜಾರಿಗೆ ತಂದ ಕೇರಳ ಹೈಕೋರ್ಟ್: ಯೋಜನೆಗೆ ಅಂಚೆ ಇಲಾಖೆಯ ಸಹಯೋಗ

               ಕೊಚ್ಚಿ: ಹೈಕೋರ್ಟ್‍ಗೆ ಹಾಜರಾಗುವಂತೆ ಕಕ್ಷಿದಾರರಿಗೆ ಇ-ಪೋಸ್ಟ್ ಮೂಲಕ ನೋಟಿಸ್ ಕಳುಹಿಸಲಾಗುವುದು. ಇ-ಪೋಸ್ಟ್ ಮೂಲಕ ನೋಟಿಸ್ ಕಳುಹಿಸಲು ಪ್ರಾರಂಭಿಸಿದ ದೇಶದಲ್ಲೇ ಮೊದಲನೆಯದು ಕೇರಳ ಹೈಕೋರ್ಟ್. ಈ ಯೋಜನೆಯು ಅಂಚೆ ಇಲಾಖೆಯ ಸಹಯೋಗದಲ್ಲಿ ವ್ಯವಸ್ಥೆಗೊಳಿಸಲಾಗಿದೆ. 

                ಹೈಕೋರ್ಟ್‍ನಲ್ಲಿ ದಾಖಲಾದ ಪ್ರಕರಣಗಳಲ್ಲಿ ನೋಟಿಸ್ ಜಾರಿ ಮಾಡಿದ ನಂತರವೂ ಕಕ್ಷಿದಾರರು ನೋಟಿಸ್ ಸ್ವೀಕರಿಸದ ಸಮಸ್ಯೆಯನ್ನು ತಪ್ಪಿಸಲು ಯೋಜನೆ ಉದ್ದೇಶಿಸಲಾಗಿದೆ. ನೋಟಿಸ್‍ಗಳು ತಡವಾಗಿ ಸ್ವೀಕೃತಿಯಿಂದ ವಿಚಾರಣೆಯಲ್ಲಿ ವಿಳಂಬವಾಗುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇ-ಪೋಸ್ಟಲ್ ವ್ಯವಸ್ಥೆ ಬಂದ ನಂತರ ಕಕ್ಷಿದಾರರಿಗೆ ಒಂದೇ ದಿನದಲ್ಲಿ ನೋಟಿಸ್ ನೀಡಬಹುದಾಗಿದೆ. ಕಳುಹಿಸಲಾದ ಸೂಚನೆಗಳನ್ನು ಕಕ್ಷಿದಾರರು ಸ್ವೀಕರಿಸಿರುವರೆಂಬುದನ್ನು ಖಚಿತಪಡಿಸಿಕೊಳ್ಳಬಹುದು. ಮೊದಲ ಹಂತದಲ್ಲಿ ತಿರುವನಂತಪುರಂ ಜಿಲ್ಲೆಯ ಕಕ್ಷಿದಾರರಿಗೆ ಈ ವ್ಯವಸ್ಥೆಯ ಮೂಲಕ ನೋಟಿಸ್ ಕಳುಹಿಸಲಾಗುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries