ಮಂಜೇಶ್ವರ: 2024-25ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ಸೋಮವಾರ ಜಿ.ವಿ.ಎಚ್.ಎಸ್. ಎಸ್ ಕುಂಜತ್ತೂರು ಶಾಲೆಯಲ್ಲಿ ಸಂಭ್ರಮದಿಂದ ಜರಗಿತು.
ನೂತನವಾಗಿ ಶಾಲೆಗೆ ದಾಖಲಾತಿಗೊಂಡ ಮಕ್ಕಳನ್ನು ಬಲೂನುಗಳನ್ನು ನೀಡಿ ಪ್ರೀತಿಯಿಂದ ಸ್ವಾಗತಿಸಲಾಯಿತು. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಖಾದರ್ ಹನೀಫ್ ಎಸ್ ಕೆ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ನೀಡುವುದರ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಅರ್ಥಪೂರ್ಣವಾದ ಚಾಲನೆಯನ್ನು ನೀಡಲಾಯಿತು.
ಮಂಜೇಶ್ವರ ಪೋಲೀಸ್ ಠಾಣೆಯ ಅಧಿಕಾರಿ ಲಿನೇಶ್, ಎಸ್.ಎಂ.ಸಿ ಸದಸ್ಯ ಈಶ್ವರ ಎಂ, ವಿ.ಎಚ್.ಎಸ್.ಸಿ.ಪ್ರಾಚಾರ್ಯ ಶಿಶುಪಾಲನ್, ಹಿರಿಯ ಶಿಕ್ಷಕಿ ರಾಣಿ ವಾಸುದೇವನ್, ಅನಿತಾ ಪಿ ಜಿ, ನಿವೃತ್ತ ಶಿಕ್ಷಕಿ ಅಮಿತಾ, ರವೀಂದ್ರ ರೈ ಕೆ. ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಎಸ್. ಎಸ್. ಎಲ್. ಸಿ ಮತ್ತು ವಿ. ಎಚ್. ಎಸ್. ಸಿ. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೈ ಐ ಪಿ ಯಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಗಳಾದ ಅವ್ವಮ್ಮರಫೀನ, ಶಿಝ ಮತ್ತು ಫಾತಿಮತ್ ಇಝ ಇವರನ್ನು ಶಾಲಾ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ ಸ್ವಾಗತಿಸಿ, ಶಿಕ್ಷಕ ದಿವಾಕರ ಬಲ್ಲಾಳ ಎ ಬಿ ವಂದಿಸಿದರು. ಕವಿತಾ ಕೆ, ಅಶ್ರಫ್ ಸಿ ಕಾರ್ಯಕ್ರಮವನ್ನು ನಿರೂಪಿಸಿದರು.