HEALTH TIPS

ಬದಿಯಡ್ಕ ರೋಟರಿಯ ನೂತನ ಪದಾಧಿಕಾರಿಗಳ ಪದಗ್ರಹಣ

                    ಬದಿಯಡ್ಕ :  ರೋಟರಿ ಬದಿಯಡ್ಕದ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮ ವಳಮಲೆ ಇರಾ ಸಭಾಭವನದಲ್ಲಿ ಭಾನುವಾರ ಜರಗಿತು. ಕುಮಾರಿ ಧನ್ವಿತಾ ಪ್ರಭು ಅವರ ಪೂಜಾ ನೃತ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು  ರೊಟೇರಿಯ ಎನ್. ಬಿ. ಗಣೇಶ್  ಪೈ ಯವರು ರೋಟರಿ ಪ್ರಾರ್ಥನೆಯನ್ನು  ಹಾಡುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು. 

             ಸಭೆಯಲ್ಲಿ ರೋಟರಿ ಬದಿಯಡ್ಕದ ನಿಕಟಪೂರ್ವ ಅಧ್ಯಕ್ಷ ಬಿ. ರಾಧಾಕೃಷ್ಣ ಪೈ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಸರ್ವ ಸದಸ್ಯರ ಸಹಕಾರದಿಂದ ತಾವು ಗೈದ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. 

              ಚುನಾಯಿತ ರೋಟರಿ ಜಿಲ್ಲಾ ಗವರ್ನರ್ ರೊಟೇರಿಯನ್ ಮೇಜರ್ ಡೋನರ್ ಎಂ .ವಿ. ಮೋಹನದಾಸ್ ಮೆನನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬದಿಯಡ್ಕ ರೋಟರಿ ಕ್ಲಬ್ ನ ಸ್ವಯಂಸೇವಾ ಕಾರ್ಯಚಟುವಟಿಕೆಗಳ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 

            ನಿಯುಕ್ತ ರೋಟರಿ ಕೋಶಾಧಿಕಾರಿ ರೋಟೇರಿಯನ್ ಬಿ. ಗೋಪಾಲಕೃಷ್ಣ ಕಾಮತ್ ರವರು ನೂತನ ಸದಸ್ಯರ ಪರಿಚಯವನ್ನು ಮಾಡಿದರು.  ರೋಟರಿ 3204 ಜಿಲ್ಲಾ ಸಹಾಯಕ ಗವರ್ನರ್  ರೊಟೇರಿಯನ್ ಹರೀಶ್ ವಿ. ವಿ. ಯವರು ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಕರಿಂಬಿಲ ನಾರಾಯಣ ಚೆಟ್ಟಿಯಾರ್ ರವರಿಗೆ ರೋಟರಿ ಲಾಂಛನವನ್ನು ತೊಡಿಸಿ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ಮಾತನಾಡಿದರು.  

             ಉಪಾಧ್ಯಕ್ಷ ಶಿಬು ಜಾನ್ ರವರು  ಬದಿಯಡ್ಕ ರೋಟರಿಯ  ನಿಯೋಜಿತ ನೂತನ ಅಧ್ಯಕ್ಷ ಬಿ.ಕೇಶವ ಪಾಟಾಳಿಯವರ ಕಿರು ಪರಿಚಯವನ್ನು ಮಾಡಿದರು. 2024 - 25ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಬಿ. ಕೇಶವ ಪಾಟಾಳಿಯವರು  ಬದಿಯಡ್ಕ ರೋಟರಿ ಕ್ಲಬ್ ವತಿಯಿಂದ ರೋಟರಿ ಫೌಂಡೇಶನ್ ನಿಧಿಗೆ ರೂ 25000 ಗಳ ಚೆಕ್ ಅನ್ನು ಹಸ್ತಾಂತರಿಸಿ ಕ್ಲಬ್ ನ  ಮುಂದಿನ ಕಾರ್ಯ ಯೋಜನೆಗಳನ್ನು  ಸಭೆಯ ಮುಂದೆ ಪ್ರಸ್ತಾಪಿಸಿದರು . ಕಾಸರಗೋಡು ಜಿಲ್ಲಾ 3204 ಸಂಯೋಜಕ ಕೆ. ರಾಧಾಕೃಷ್ಣನ್ ಕಾಸರಗೋಡು ರವರು ವಿದ್ಯಾರ್ಥಿಗಳಿಗೆ ಕಲಿಕೋಪಕರಣ, ಪೀನ ದರ್ಪಣ , ಜೈವಿಕ ಲೇಖನಿಗಳನ್ನು ಶಾಲಾ ಮಕ್ಕಳಿಗೆ ವಿತರಿಸುವ ಕಾರ್ಯ ಯೋಜನೆಯನ್ನು ಉದ್ಘಾಟಿಸಿದರು. ಬದಿಯಡ್ಕ ಕ್ಲಬ್ ನ ರಚನೆಗೆ ಕಾರಣೀಕರ್ತರಾದ ವಿ. ಅನಿಲ್ ಕುಮಾರ್ ನೀಲೇಶ್ವರ್ ರವರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಬಳಿಕ ವಿವಿಧ ವಿದ್ಯಾಭ್ಯಾಸ ಕ್ಷೇತ್ರಗಳಲ್ಲಿ ಉನ್ನತ ಸಾಧನೆಯನ್ನು ಗೈದ ವಿದ್ಯಾರ್ಥಿಗಳಾದ  ಕುಮಾರಿ ಯತಿಕಾ , ಅನುರಾಗ್,  ಕೌಶಿಕ್ ಹಾಗೂ ಕ್ರಿಸ್ ಜಾನ್ ರಿಗೆ ಶಾಶ್ವತ ಫಲಕವನ್ನಿತ್ತು ಗೌರವಿಸಲಾಯಿತು. .

            ಮಾತೃ ಕ್ಲಬ್ ರೋಟರಿ ನೀಲೇಶ್ವರ ಹಾಗೂ  ನೆರೆಯ ಕ್ಲಬ್ ಗಳಾದ ಕಾಸರಗೋಡು , ಕಾಂಇ್ಞಔಗಾಡ್  ಮೊದಲಾದ ರೋಟರಿ ಕ್ಲಬ್ ಗಳ ಪದಾಧಿಕಾರಿಗಳು ಆಗಮಿಸಿ ಸಭಾ ಮೆರುಗನ್ನಿತ್ತರು. 

         ವೇದಿಕೆಯಲ್ಲಿ ನಿಕಟಪೂರ್ವ ಕಾರ್ಯದರ್ಶಿ ವೈ. ರಾಘವೇಂದ್ರ ಪ್ರಸಾದ್ ನಾಯಕ್ ರವರು ಉಪಸ್ಥಿತರಿದ್ದರು. ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಬಿ. ಗುರುಪ್ರಸಾದ್ ಶೆಣೈ ಹಾಗೂ ಹನ್ನೆರಡು ಮಂದಿ ರೊಟೇರಿಯನ್ ಗಳನ್ನು ನೂತನ ಪದಾಧಿಕಾರಿಗಳಿಗೆ  ರೋಟರಿ ಲಾಂಛನವನ್ನು ತೊಡಿಸಿ ನಿಯುಕ್ತಗೊಳಿಸಲಾಯಿತು.

          ನೂತನ ಸಾರ್ಜೆಂಟ್ ಅಟ್ ಆಮ್ರ್ಸ್ ರಾಗಿ ನಿಯುಕ್ತಿಗೊಂಡ ಯುವ ಉದ್ಯಮಿ ಪ್ರತೀಕ್ ಆಳ್ವಾ ಪೆರಡಾಲ ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿಯಂತ್ರಿಸಿದರು. ಕಾರ್ಯಕ್ರಮವನ್ನು ಕು. ಯತಿಕಾ ಹಾಗೂ  ಕು. ಡೋನ್ ಮರಿಯಾ ರವರು ನಿರೂಪಿಸಿದರು. ನೂತನ ಕಾರ್ಯದರ್ಶಿಯಾದ ರಮೇಶ್ ಆಳ್ವಾ ಕಡಾರು ಅವರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries