ತಿರುವನಂತಪುರಂ: ಕಾರಿನಲ್ಲಿ ಈಜುಕೊಳ ನಿರ್ಮಿಸಿದ ಯೂಟ್ಯೂಬರ್ ಸಂಜು ಟೆಕ್ಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮೋಟಾರು ವಾಹನ ಇಲಾಖೆ ಸಿದ್ಧತೆ ನಡೆಸಿದೆ.
ಯೂ ಟ್ಯೂಬರ್ ನ ಹಿಂದಿನ ವೀಡಿಯೊಗಳನ್ನು ಪರಿಶೀಲಿಸಲಾಗುತ್ತದೆ.
ವಾಹನಕ್ಕೆ ಸಂಬಂಧಿಸಿದ ವಿಡಿಯೋಗಳಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಹೇಳಿದ್ದಾರೆ.
ಶ್ರೀಮಂತರು ಕಾರಿನಲ್ಲಿ ಈಜಕೊಳ ನಿರ್ಮಿಸಿ ಈಜಾಡುವುದಲ್ಲ, ಮನೆಯಲ್ಲಿ ನಿರ್ಮಿಸಿ ಈಜಾಡಿದರೆ ಸಾಕು. ಹುಚ್ಚುತನದ ಅಸಮತೋಲನದ ಕೆಲಸಗಳಿಗೆ ಕೈಯಿಕ್ಕಬೇಡಿ ಎಂದು ಗಣೇಶ್ ಕುಮಾರ್ ಪ್ರತಿಕ್ರಿಯಿಸಿದರು. ಮೋಟಾರು ವಾಹನ ಇಲಾಖೆಗೆ ಸವಾಲು ಹಾಕುವ ಅಗತ್ಯವಿಲ್ಲ, ಇದು ಹಳೆಯ ಕಾಲವೂ ಅಲ್ಲ ಎಂದರು.
ಟಾಟಾ ಸಫಾರಿ ಕಾರಿನ ಮಧ್ಯದಲ್ಲಿ ಸೀಟ್ ತೆಗೆದು ಈಜುಕೊಳ ನಿರ್ಮಿಸಿ ಪ್ರಯಾಣಿಸುತ್ತಿದ್ದ ಸಂಜು ಮತ್ತು ಆತನ ಸ್ನೇಹಿತ ಸೂರ್ಯನಾರಾಯಣ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಾರನ್ನು ಜಪ್ತಿ ಮಾಡಿ ನೋಂದಣಿ ರದ್ದುಪಡಿಸಿ ಮೋಟಾರು ವಾಹನ ಇಲಾಖೆ ಪ್ರಕರಣ ದಾಖಲಿಸಿದೆ.