ನವದೆಹಲಿ: ಬಿಜೆಪಿಯ ಗೆಲುವಿನ ಸಂಖ್ಯೆಯು ಲೋಕಸಭಾ ಚುನಾವಣೆಯ ಸರಳ ಬಹುಮತ ಸಂಖ್ಯೆಗಿಂತಲೂ ಕುಸಿಯುತ್ತಿದೆ ಎಂಬುದನ್ನು ಚುನಾವಣಾ ಫಲಿತಾಂಶದ ಇತ್ತೀಚಿನ ಚಿತ್ರಣ ಹೇಳುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಗ್ಭ್ರಮೆಗೊಳಿಸಿದೆ ಎಂದು ಕಾಂಗ್ರೆಸ್ ಹೇಳಿದೆ.

ಚುನಾವಣಾ ಫಲಿತಾಂಶದ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ಅವರಿಗೆ ನೈತಿಕವಾಗಿ ಸೋಲಾಗಿದೆ ಎಂದಿದ್ದಾರೆ.
'543 ಕ್ಷೇತ್ರಗಳ ಚಿತ್ರಣ ಸಿಕ್ಕಿದೆ. ಮೋದಿ ಅವರಿಗೆ ರಾಜಕೀಯವಾಗಿ ಹಾಗೂ ನೈತಿಕವಾಗಿ ಆಘಾತಕಾರಿ ಸೋಲಾಗಿದೆ ಎಂಬುದು ಸ್ಪಷ್ಟ. ಚುನಾವಣೋತ್ತರ ಸಮೀಕ್ಷೆಗಳ ಬಣ್ಣ ಬಯಲಾಗಿದೆ. ಅವು ಕಪೋಲಕಲ್ಪಿತ ಎಂಬುದು ಸ್ಪಷ್ಟವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ ಪಕ್ಷ ಎನಿಸಿದೆ.
ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ, ಬಿಜೆಪಿ 243 ಕಡೆ ಮುನ್ನಡೆ/ಗೆಲುವು ಸಾಧಿಸಿದೆ. ಕಾಂಗ್ರೆಸ್‌ಗೆ 95 ಕ್ಷೇತ್ರಗಳಲ್ಲಿ ಮುನ್ನಡೆ/ಗೆಲುವು ಲಭಿಸಿದೆ.