ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯವು ವಿವಿಧ ಸ್ನಾತಕೋತ್ತರ ವಿಭಾಗಗಳ ಪ್ರವೇಶಕ್ಕಾಗಿ ತಾತ್ಕಾಲಿಕ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಯುಇಟಿ-ಪಿಜಿ) ಕಾಣಿಸಿಕೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.cukerala.ac.in ಗೆ ಭೇಟಿ ನೀಡುವ ಮೂಲಕ ಶ್ರೇಣಿ ಪಟ್ಟಿಯನ್ನು ಪರಿಶೀಲಿಸಬಹುದು. ಇಂದು ಮೇ 30ಮತ್ತು 31ರಂದು ಚಿಜmissioಟಿs@ಛಿuಞeಡಿಚಿಟಚಿ.ಚಿಛಿ.iಟಿ ಎಂಬ ಇ-ಮೈಲ್ ಮೂಲಕ ದೂರುಗಳನ್ನು ಕಳುಹಿಸಬಹುದಾಗಿದೆ. ಅಂತಿಮ ರ್ಯಾಂಕ್ ಪಟ್ಟಿಯನ್ನು ಜೂನ್ 1 ರಂದು ಪ್ರಕಟಿಸಲಾಗುವುದು.