ಮಂಜೇಶ್ವರ: ಆನೆಕಲ್ಲು ಎ.ಯು.ಪಿ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ವಿಜೃಂಭಣೆಯಿಂದ ಜರಗಿತು. ಗ್ರಾಮ ಪಂಚಾಯತಿ ಸದಸ್ಯೆ ಸೀತಾ , ಬಿ.ಆರ್.ಸಿ.ಯ ಸ್ಪೆಷಲ್ ಎಜುಕೇಟರ್ ಅನಿತಾ , ಶಾಲಾ ಪ್ರಬಂಧಕ ಸಿಬ್ಬಂದಿ ಮುರುಳಿ ಶ್ಯಾಮ್, ಬೋರ್ಕಳ ವಾರ್ಡಿನ ಆಶಾ ಕಾರ್ಯಕರ್ತೆ ಜಮೀಲ, ಶಾಲಾ ಪಿ.ಟಿ.ಎ ಉಪಾಧ್ಯಕ್ಷ ಅಬ್ದುಲ್ ಖಾದರ್, ಎಂ.ಪಿ.ಟಿ.ಎ ಅಧ್ಯಕ್ಷೆ ದೀಕ್ಷಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿ.ಟಿ.ಎ ಅಧ್ಯಕ್ಷ ಅಶ್ರಫ್ ಎ.ಎಂ ಆನೆಕಲ್ಲು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಈ ಸಂದರ್ಭ ಎಲ್.ಕೆ.ಜಿ ಹಾಗೂ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಸ್ಲೇಟು ,ಪುಸ್ತಕ ,ಬಳಪ ಹಾಗೂ ಒಂದನೇ ತರಗತಿಯ ಮಕ್ಕಳಿಗೆ ಬ್ಯಾಗ್, ಸಮವಸ್ತ್ರ, ಪುಸ್ತಕ ವಿತರಿಸಲಾಯಿತು.
ಜೊತೆಗೆ ಪೇರೆಂಟ್ಸ್ ಅವರ್ನೆಸ್ ಪ್ರೋಗ್ರಾಮ್ ಹರೀಶ.ವಿ ನಡೆಸಿಕೊಟ್ಟರು. Àುುಖ್ಯ ಶಿಕ್ಷಕಿ ರೇಣುಕಾ.ವಿ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ರವಿಶಂಕರ್ ವಂದಿಸಿದರು. ಸಂತೋಷ್ ಕುಮಾರ್.ಕೆ ಮತ್ತು ರೇಖಾ ಸಿ. ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.