HEALTH TIPS

ಭಾರತೀಯ ಭೂ ಸೇನೆಯ ಲೆಫ್ಟ್ಯಿನೆಂಟ್ ಆಗಿ ಸಾತ್ವಿಕ್ ಎಸ್.ರೈ ಆಯ್ಕೆ

               ಕಾಸರಗೋಡು : ನಗರದ ನಿವಾಸಿ ಸಾತ್ವಿಕ್ ಎಸ್ ರೈ ಅವರು ಭಾರತೀಯ ಭೂ ಸೇನೆಯ ಲೆಫ್ಟ್ಯಿನೆಂಟ್ ಆಗಿ ನೇರ ನೇಮಕಾತಿಯೊಂದಿಗೆ ಆಯ್ಕೆಗೊಂಡಿದ್ದಾರೆ.  ಬಿಹಾರ ಗಯಾದ ಆಫೀಸರ್ಸ್ ಟ್ರ್ರೈನಿಂಗ್ ಅಕಾಡೆಮಿಯಲ್ಲಿ 5 ವರ್ಷಗಳ ಕಠಿಣ ತರಬೇತಿಯ ಬಳಿಕ ಭೂ ಸೇನೆಯ ಮುಖ್ಯಸ್ಥ ಲೆ. ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಭೂ ಸೇನೆಯ ಈ ಪ್ರಮುಖ ಹುದ್ದೆಯನ್ನು ಸ್ವೀಕರಿಸಿದ್ದಾರೆ. 

                 ಲೆಫ್ಟ್ಯಿನೆಂಟ್ ಸಾತ್ವಿಕ್ ರೈ ಅವರು ಕಾಸರಗೋಡು ಚೈತನ್ಯ ವಿದ್ಯಾಲಯ,ಕಾಸರಗೋಡು ಚಿನ್ಮಯ ವಿದ್ಯಾಲಯ ಮತ್ತು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದಾರೆ.  ಪದವಿ ಶಿಕ್ಷಣದ ನಂತರ ಬಿಹಾರ ಗಯಾದ ಮಿಲಿಟರಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರ್ಪಡೆಗೊಂಡಿರುವ ಇವರು ತರಬೇತಿಯೊಂದಿಗೆ ಇಂಜಿನಿಯರಿಂಗ್ ಬಿ. ಟೆಕ್ ಇಲೆಕ್ಟ್ರಾನಿಕ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿ, ನೇರ ನೇಮಕಾತಿ ಮೂಲಕ ಸೇನೆಯ ಮಹತ್ವದ ಲೆಫ್ಟ್ಯಿನೆಂಟ್ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಪದವಿ ಸ್ವೀಕಾರ ಸಮಾರಂಭದಲ್ಲಿ ಹೆತ್ತವರಾದ ಕಾಸರಗೋಡಿನ ಹಿರಿಯ ವಕೀಲ ಹಾಗೂ ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ಸದಾನಂದ ರೈ  ಕಾಸರಗೋಡು ಚಿನ್ಮಯ ವಿದ್ಯಾಲಯದ ಇಂಗ್ಲಿಷ್ ಪ್ರಾದ್ಯಾಪಕಿ ಶರಣ್ಯ ಎಸ್ ರೈ, ಸಹೋದರ ರಿತ್ವಿಕ್ ರೈ ಪಾಲ್ಗೊಂಡಿದ್ದರು.  

             ಕಾಸರಗೋಡಿಗೆ ಆಗಮಿಸಿದ ಸಾತ್ವಿಕ್ ಎಸ್ ರೈ ಅವರನ್ನು ವಿವಿಧ ಸಂಘ ಸಂಸ್ಥೆಗಳು,  ಅಭಿಮಾನಿ ಬಳಗದ ವತಿಯಿಂದ ಗೌರವಿಸಲಾಯಿತು. ಪ್ರತಿಭಾವಂತ ಕ್ರೀಡಾ ಪಟು ಕೂಡ ಆಗಿರುವ ಸಾತ್ವಿಕ್ ರೈ ತನ್ನ ಸಾಧನೆಗಳಿಗೆ ಹೆತ್ತವರ ಪೆÇ್ರೀತ್ಸಾಹ ಕಾರಣವೆಂದು ತಿಳಿಸುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries