ಪತ್ತನಂತಿಟ್ಟ: ತಿರುವಲ್ಲ ಸರ್ಕಾರಿ ಪ್ರಾಥಮಿಕ .ಶಾಲೆಯ ಪ್ರವೇಶೋತ್ಸವವನ್ನು ರದ್ದುಗೊಳಿಸಲಾಗಿದೆ. ಹೊಸದಾಗಿ ನೇಮಕಗೊಂಡ ಏಕಶಿಕ್ಷಕಿ ಇಲ್ಲಿಗೆ ಆಗಮಿಸದಿರುವುದು ಕಾರಣ.
ಶಿಕ್ಷ ಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ನೇಮಕಾತಿ ಪತ್ರಕ್ಕಾಗಿ ನಿಂತಿರುವುದಾಗಿ ಶಿಕ್ಷಕಿ ಮಾಹಿತಿ ನೀಡಿರುವರು.
ಹತ್ತಕ್ಕೂ ಹೆಚ್ಚು ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆದ ಶಾಲೆಯಲ್ಲಿ ಪ್ರವೇಶೋತ್ಸವ ಮೊಟಕುಗೊಂಡಿತು. ಬೆಳಗ್ಗೆ 10ರಿಂದ 12ರವರೆಗೆ ಶಿಕ್ಷಕರಿಗಾಗಿ ಪೋಷಕರು ಕಾಯುತ್ತಿದ್ದರು. ಸಾಮಾನ್ಯ ಜನರ ಮಕ್ಕಳು ಓದುವ ಶಾಲೆ ಇದಾಗಿದೆ. ಈ ಶಾಲೆಯಲ್ಲಿ ಸುಮಾರು 27 ವಿದ್ಯಾರ್ಥಿಗಳಿದ್ದಾರೆ.
ನಿನ್ನೆ ರಾಜ್ಯಾದ್ಯಂತ ಒಂದನೇ ತರಗತಿಗೆ 2.44 ಲಕ್ಷ ಮಕ್ಕಳು ಪ್ರವೇಶ ಪಡೆದಿದ್ದಾರೆ. ಆದರೆ ಅಂಕಿ ಅಂಶಗಳ ಪ್ರಕಾರ ಕೇರಳ ಪಠ್ಯಕ್ರಮದ ಬಗ್ಗೆ ಆಸಕ್ತಿ ಕಡಮೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ 53,421 ಮಂದಿ ಕಡಮೆ ವಿದ್ಯಾರ್ಥಿಗಳಿದ್ದಾರೆ. ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಕಡಮೆಯಾಗಿದ್ದಾರೆ.