HEALTH TIPS

ಜಲಶಕ್ತಿ ಅಭಿಯಾನ ಕೇಂದ್ರ ಸಮಿತಿಯಿಂದ ಜಲಸಂರಕ್ಷಣಾ ಚಟುವಟಿಕೆಗಳ ಮೌಲ್ಯಮಾಪನ

            ಕಾಸರಗೋಡು: ಜಲಶಕ್ತಿ ಅಭಿಯಾನ ಕೇಂದ್ರ ತಂಡ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಸಂರಕ್ಷಣಾ ಚಟುವಟಿಕೆಗಳ ಮೌಲ್ಯಮಾಪನ ನಡೆಸಿತು. 

              ಜಲಶಕ್ತಿ ಅಭಿಯಾನದ ಕೇಂದ್ರ ನೋಡಲ್ ಅಧಿಕಾರಿ ಎಸ್ ಇಝಡ್ ನೋಯ್ಡಾ ಅಭಿವೃದ್ಧಿ ಆಯುಕ್ತ ಎ. ಬಿಪಿನ್ ಮೆನನ್ ಐಎಎಸ್, ತಾಂತ್ರಿಕ ನೋಡಲ್ ಅಧಿಕಾರಿ ಹಾಗೂ ತಿರುವನಂತಪುರಂ ಸೆಂಟ್ರಲ್ ಗ್ರೌಂಡ್ ವಾಟರ್ ರಿಸರ್ಚ್ ಬೋರ್ಡ್ ವಿಜ್ಞಾನಿ ಕೆ. ಅನಿಶಾ ತಂಡದಲ್ಲಿದ್ದು, ಜೂನ್ 28ರವರೆಗೆ ಜಿಲ್ಲೆಯ ವಿವಿಧ ಜಲಸಂರಕ್ಷಣಾ ಚಟುವಟಿಕೆಗಳ ಮೌಲ್ಯಮಾಪನ ನಡೆಸಲಿದ್ದಾರೆ.  ಜಲಸಂರಕ್ಷಣಾ ಜಾಗೃತಿ ಕಾರ್ಯದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ಎಂದರು.

              ಜಿಲ್ಲಾಧಿಕಾರಿಗಳ ಚೇಂಬರ್‍ನಲ್ಲಿ ಜವಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದಂತೆ ನಾನಾ ಇಲಾಖೆಗಳಿಂದ ನಡೆಯುತ್ತಿರುವ ಚಟುವಟಿಕೆಗಳ ವಿವರಣೆ ಆಲಿಸಿದ ಕೇಂದ್ರ ತಂಡ ನಂತರ ವಿವಿಧೆಡೆ ಭೇಟಿ ನೀಡಿತು. ಅರಣ್ಯದಲ್ಲಿರುವ ಚಿಲುಮೆಗಳನ್ನು ಪತ್ತೆ ಹಚ್ಚಿ ಸ್ವಚ್ಛಗೊಳಿಸಿ ಕಾಡುಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಜಿಲ್ಲೆಯ ವಿಶೇಷ ಯೋಜನೆಯಾಗಿ ನಡೆದಿದೆ. 

               ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗೆ ಒಂದು ಗದ್ದೆ ಸಂರಕ್ಷಣಾ ಸಮಿತಿ ಎಂಬ ಯೋಜನೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮಾಹಿತಿ ನೀಡಿದರು. ಎಂಜಿಎನ್‍ಆರ್‍ಇಜಿಎಸ್ ಕಾರ್ಯಕರ್ತರು ಕೆರೆ ನವೀಕರಣ, ಭೂಸವಳಿಕೆ ತಡೆಗಟ್ಟಲು ಹುರಿಹಗ್ಗದಿಮದ ನೇಯ್ದ ಬಲೆ ಹಾಕುವ ಕೆಲಸ, ಕಾಂಡ್ಲಾ ಸಸಿ ನೆಡುವಿಕೆ, ದಡ ಸಂರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕೃಷಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಅರಣ್ಯಇಲಾಖೆ, ನೆಹರು ಯುವ ಕೇಂದ್ರ, ಅಂತರ್ಜಲ ಇಲಾಖೆ, ಎಂಜಿಎನ್‍ಆರ್‍ಇಜಿಎಸ್ ಮತ್ತು ಜಲಶಕ್ತಿ ಅಭಿಯಾನದ ಭಾಗವಾಗಿರುವ ಇತರ ಇಲಾಖೆಗಳು ನಡೆಸಿರುವ  ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

             ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭೂಗರ್ಭಜಲ ಇಲಾಖೆ ಅಧಿಕಾರಿ ಓ.ರತೀಶ್ ಕಾರ್ಯಚಟುವಟಿಕೆಗಳನ್ನು ಮಂಡಿಸಿದರು.ಎಲ್‍ಎಸ್‍ಜಿಡಿ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ವಿಭಾಗೀಯ ಅರಣ್ಯಾಧಿಕಾರಿ ಬಿ. ಅಶ್ರಫ್, ನವಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ಪ್ರಧಾನ ಕೃಷಿ ಅಧಿಕಾರಿ ಜ್ಯೋತಿಕುಮಾರಿ, ಎನ್ ಐಸಿ ಜಿಲ್ಲಾ ಅಧಿಕಾರಿ ಕೆ.ಲೀನಾ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ.ಟಿ.ಸಂಜೀವ್, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಪಿ. ಅಖಿಲ್ ಮೊದಲಾದವರು ಉಪಸ್ಥಿತರಿದ್ದರು.  ಜಲಶಕ್ತಿ ಅಭಿಯಾನದ ಕೇಂದ್ರ ಅಧಿಕಾರಿಗಳು ಜಿಲ್ಲೆಯ ವಿವಿಧ ಜಲಸಂರಕ್ಷಣಾ ಕೇಂದ್ರಗಳಿಗೆ ಭೇಟಿ ನೀಡಿದರು.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries