ಎರ್ನಾಕುಳಂ: ದೆಹಲಿಯಿಂದ ಎರ್ನಾಕುಳಂ ಸಂಚರಿಸುತ್ತಿದ್ದ ಮಂಗಳಾ ಎಕ್ಸ್‍ಪ್ರೆಸ್ ರ್ಯಲಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಿಹಾರ ನಿವಾಸಿ ಸೀತಾರಾಮ್(45) ಎಂಬಾತನನ್ನು ರೈಲ್ವೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೈಲು ದೆಹಲಿಯಿಂದ ಎರ್ನಾಕುಳಂ ತೆರಳಲು ಆಗಮಿಸಿ ಕಾಸರಗೋಡು ನಿಲ್ದಾಣದಿಂದ ಮುಂದೆ ತೆರಳಿದ ಅಲ್ಪ ಹೊತ್ತಿನಲ್ಲಿ ರೈಲಿನಿಂದ ಒಬ್ಬ ಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿತ್ತು. ತಕ್ಷಣ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಮಹೇಶ್ ಸಿ.ಕೆ ನೇತೃತ್ವದ ಪೊಲೀಸರು ಸುಮಾರು ಮೂರು ಕಿ.ಮೀ ದೂರದ ಕಲ್ನಾಡು ಪ್ರದೇಶಕ್ಕೆ ತೆರಳಿ ನೋಡಿದಾಗ ವ್ಯಕ್ತಿಯೊಬ್ಬ ಬಿದ್ದಿರುವುದು ಕಂಡುಬಂದಿತ್ತು. ಈ ಪ್ರದೇಶಕ್ಕೆ ಆಂಬುಲೆನ್ಸ್ ವಾಹನ ತೆರಳಲು ಸಾಧ್ಯವಾಗದ ಹಿನೆಲೆಯಲ್ಲಿ ಗಾಯಾಳುವನ್ನು ಬ್ಲಾಂಕೆಟ್ ಒಂದರಲ್ಲಿ ಮಲಗಿಸಿ ಎತ್ತಿಕೊಂಡು ಆಂಬುಲೆನ್ಸ್ ಇದ್ದ ಜಾಗಕ್ಕೆ ಆಗಮಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.