ಇರಿಯಣ್ಣಿ: ಎಸ್.ಎಸ್.ಎಲ್.ಸಿ. ತರಗತಿಗಳಿಂದ ಉತ್ತೀರ್ಣಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಸಮೀಪದ ಶಾಲೆಗಳಲ್ಲಿ ದಾಖಲಾತಿಗೆ ಬ್ಯಾಚ್ ಮಂಜೂರು ಮಾಡಬೇಕು, ಶಾಲಾ ಮಕ್ಕಳನ್ನು ಸಾಗಿಸುವ ವಾಹನ ಚಾಲಕರ ಕುಡುಕತನ, ನಿμÁ್ಕಳಜಿತನ, ವಾಹನಗಳ ದಕ್ಷತೆ, ಪರಿಣಾಮಕಾರಿ ಮಧ್ಯಾಹ್ನದ ಊಟ ಯೋಜನೆ, ಅಪಾಯಕಾರಿ ವಿದ್ಯುತ್ ಕಂಬಗಳ ವಿಲೇವಾರಿ ಮುಂತಾದ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಇರಿಯಣ್ಣಿಯ ಪೇರಡ್ಕ ಮಹಾತ್ಮಾಜಿ ವಾಚನಾಲಯ ಮತ್ತು ಗ್ರಂಥಾಲಯದ ತುರ್ತು ಸಭೆಯಲ್ಲಿ ಒತ್ತಾಯಿಸಲಾಗಿದೆ.
ಗ್ರಂಥಾಲಯದ ಅಧ್ಯಕ್ಷ ಕೆ.ರಘು ಅಧ್ಯಕ್ಷತೆ ವಹಿಸಿದ್ದರು. ಪಿ.ರಾಧಾಕೃಷ್ಣನ್, ಕೆ.ರವಿ, ಟಿ.ಸಾಜು, ಟಿ.ವಿ.ವಿನೋದ್ ಕುಮಾರ್, ಎ.ಒ. ಸುಜಾತಾ ಮಾತನಾಡಿದರು. ಕಾರ್ಯದರ್ಶಿ ಕೆ.ಸತ್ಯನ್ ಸ್ವಾಗತಿಸಿ, ಕೆ.ಎಂ.ಅಬ್ದುಲ್ ಹಾಶಿಂ ವಂದಿಸಿದರು.