HEALTH TIPS

ವಿವಾದಾತ್ಮಕ 'ಕಾಫಿರ್' ಪೋಸ್ಟ್ ಹಿಂಪಡೆದ ಕೆಕೆ ಲತಿಕಾ: ಫೇಸ್ ಬುಕ್ ಪ್ರೊಫೈಲ್ ಲಾಕ್

                ಕೋಝಿಕ್ಕೋಡ್: ವಿವಾದಿತ ಕಾಫಿರ್ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದ ಪೋಸ್ಟ್ ಅನ್ನು ಮಾಜಿ ಶಾಸಕಿ ಹಾಗೂ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಕೆ.ಲತಿಕಾ ಹಿಂಪಡೆದಿದ್ದಾರೆ. ಫೇಸ್ ಬುಕ್ ಪ್ರೊಫೈಲ್ ಕೂಡ ಲಾಕ್ ಆಗಿದೆ. ಯುಡಿಎಫ್ ಈ ಹಿಂದೆ ಲತಿಕಾ ಬಂಧನಕ್ಕೆ ಒತ್ತಾಯಿಸಿದ್ದು ನಂತರ ಈ ಕ್ರಮ ಕೈಗೊಳ್ಳಲಾಗಿದೆ.

                   ಈ ಹಿಂದೆ ಕೆ.ಕೆ. ಲತಿಕಾ ಅವರಿಂದ ಹೇಳಿಕೆ ಪಡೆದು ಅವರ ಪೋನ್ ಅನ್ನು ಸೈಬರ್ ಸೆಲ್ ಪರಿಶೀಲಿಸಿದೆ. ವಿವಾದಾತ್ಮಕ ಸಂದೇಶದ ಸ್ಕ್ರೀನ್‍ಶಾಟ್ ಅನ್ನು ಲತಿಕಾ ಪೋಸ್ಟ್ ಮಾಡಿದ್ದರು. ಹೇಳಿಕೆಯನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಪೋರಾಳಿ ಶಾಜಿಯ ಫೇಸ್‍ಬುಕ್ ಪೇಜ್‍ನಿಂದ ವಿವಾದಾತ್ಮಕ ಸಂದೇಶವನ್ನು ತೆಗೆದುಹಾಕುವಂತೆ ಪೆÇಲೀಸರು ನಿರಂತರವಾಗಿ ಫೇಸ್‍ಬುಕ್‍ಗೆ ಕೇಳಿದ್ದಾರೆ ಎಂದು ಹೇಳಲಾಗಿದ್ದರೂ ಸಹ ಲತಿಕಾ ಪುಟದಿಂದ ಸಂದೇಶವನ್ನು ತೆಗೆದುಹಾಕಿರಲಿಲ್ಲ.

                     ಯೂತ್ ಲೀಗ್ ನಿಟುಂಬ್ರಮಣ್ಣ ವಾಟ್ಸಪ್ ಗ್ರೂಪ್ ನಲ್ಲಿ ಎಂ.ಎಸ್.ಎಫ್. ಜಿಲ್ಲಾ ಕಾರ್ಯದರ್ಶಿ ಪಿ.ಕೆ. ಮುಹಮ್ಮದ್ ಖಾಸಿಮ್ ಪೋಸ್ಟ್ ಮಾಡಿದ ಸಂದೇಶದ ಹೆಸರಿನಲ್ಲಿ ನಕಲಿ ಸಂದೇಶವನ್ನು ಪ್ರಸಾರ ಮಾಡಲಾಗಿತ್ತು. ಆದರೆ, ಕಾಸಿಂ ಪೋನ್‍ನಿಂದ ಅಂತಹ ಯಾವುದೇ ಸಂದೇಶವನ್ನು ಪೋಸ್ಟ್ ಮಾಡಲಾಗಿಲ್ಲ ಅಥವಾ ಹಂಚಿಕೊಳ್ಳಲಾಗಿಲ್ಲ ಎಂದು ಪೋಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಇದಾದ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಸಿ.ಪಿ.ಎಂ. ಅನುಕೂಲಕರ ಸೈಬರ್ ಪುಟಗಳಿಗೆ ವಿಸ್ತರಿಸುವ ಪರಿಸ್ಥಿತಿಯೂ ಇತ್ತು.

                  ಈ ಸಂದೇಶ ಹೊರಬಿದ್ದಾಗಿನಿಂದಲೂ ಯುಡಿಎಫ್ ವಿರುದ್ಧ ಭಾರೀ ಪ್ರಚಾರ ನಡೆಯುತ್ತಿದೆ. ಈ ಪೋಸ್ಟ್ ಮೊದಲು ಕಾಣಿಸಿಕೊಂಡಿದ್ದು ಅಂಬಾಡಿಮುಕ್ ಕಾಮ್ರೇಡ್ಸ್ ಪೇಜ್ ನಲ್ಲಿ ಎಂಬುದು ಸದ್ಯದ ಆರೋಪ. ಇದನ್ನು ಸ್ಪಷ್ಟಪಡಿಸಲು ಪೋಲೀಸರು ಫೇಸ್ ಬುಕ್ ನಿಂದ ಮಾಹಿತಿ ಕೇಳಿದ್ದರು. ವಿವಾದಾತ್ಮಕ ಪೋಸ್ಟ್ ಹಾಕಿರುವ ಶಾಜಿಯ ಪೇಜ್ ನ ಮಾಹಿತಿಯನ್ನೂ ಕೇಳಲಾಗಿದೆ. ಇವೆರಡೂ ಸಿಪಿಎಂ. ಪ್ರೊ ಫೇಸ್ಬುಕ್ ಪುಟಗಳು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries