ಅನ್ನ, ಚಿತ್ರಾನ್ನ, ಪುಳಿಯೊಗರೆ, ಫ್ರೈಡ್ ರೈಸ್, ಬಿರಿಯಾನಿ ಹೀಗೆ ಯಾವುದೇ ಅನ್ನದ ಆಹಾರವಾಗಿರಲಿ ಅದು ಮುದ್ದೆ-ಮುದ್ದೆಯಾಗಿದ್ದಾರೆ ನೋಡುವುದಕ್ಕೂ ಚೆನ್ನಾಗಿರಲ್ಲ ರುಚಿಯೂ ಇಷ್ಟವಾಗಲ್ಲ.
ಬಿರಿಯಾನಿ, ಚಿತ್ರಾನ್ನ , ಫ್ರೈಡ್ ರೈಸ್ ಈ ಬಗೆಯ ಆಹಾರಗಳಿಗೆ ಅನ್ನ ಉದುರು-ಉದುರಾಗಿರಬೇಕು, ಅಷ್ಟೇ ಏಕೆ ನಾವು ಅನ್ನ ಮಾಡುವಾಗಲೂ ಅಂಟು ಅಂಟಾಗಿ ಇದ್ದರೆ ಚೆನ್ನಾಗಿ, ಅನ್ನ ಬಿಡಿ ಬಿಡಿ ಮಾಡಲು ಇಲ್ಲಿದೆ ಟಿಪ್ಸ್:
ಟಿಪ್ಸ್ 1
ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ
ಅಕ್ಕಿಯನ್ನು ಒಂದು ನಿಮಿಷ ತೊಳೆಯಿರಿ, ಹೀಗೆ ತೊಳೆಯುವುದರಿಂದ ಅಕ್ಕಿ ಸಂಪೂರ್ಣ ಒದ್ದೆಯಾಗುತ್ತದೆ.
ಅಕ್ಕಿಗೆ ನೀರು ಸರಿಯಾದ ಪ್ರಮಾಣದಲ್ಲಿ ಹಾಕಿ
ನೀವು 1 ಕಪ್ ಅಕ್ಕಿ ಹಾಕುವುದಾದರೆ 2 ಕಪ್ ನೀರು ಸೇರಿಸಿ. ನೀರು ಸ್ವಲ್ಪ ಕಡಿಮೆಯಾದರೆ ಅನ್ನ ಅಂಟುತ್ತದೆ.
ನೀರು ಅತಿಯಾಗಿಯೂ ಇರಬಹುದು, ನೀರು ಅತಿಯಾದರೆ ಅನ್ನ ಅಂಟುವುದು.
ಅಲ್ಲದೆ ಅನ್ನ ಬೇಯಿಸುವಾಗ ಚಟಿಕೆಯಷ್ಟು ಉಪ್ಪು ಸೇರಿಸಿ, ಇದರಿಂದ ಅನ್ನ ಅಂಟುವುದಿಲ್ಲ
ಕುಕ್ಕರ್‌ನ ಮುಚ್ಚಳ ಟೈಟ್ ಆಗಿರಬೇಕು
ಕುಕ್ಕರ್‌ನ ಮುಚ್ಚಳ ಟೈಟ್ ಆಗಿರಬೇಕು, ಅದರ ಗಾಳಿ ಹೊರಗಡೆ ಹೋಗುತ್ತಿದ್ದರೆ ಅನ್ನ ಅಂಟುವುದು. ಅಲ್ಲದೆ ಕುಕ್ಕರ್‌ನಲ್ಲಿ ಅನ್ನ ಮಾಡುವಾಗ ಕಡಿಮೆ ಉರಿಯಲ್ಲಿ ಬೇಯಿಸಿ.
ಮಡಿಕೆಯಲ್ಲಿ ಅನ್ನ ಮಾಡುವುದಾದರೆ
ಕೆಲವು ಕುಕ್ಕರ್‌ನಲ್ಲಿ ಅನ್ನ ಮಾಡುವುದಿಲ್ಲ, ಮಡಿಕೆಯಲ್ಲಿ ಮಾಡುತ್ತಾರೆ, ಹೀಗೆ ಮಡಿಕೆ ಮಾಡುವಾಗ ರಂಧ್ರವಿರುವ ತಟ್ಟೆಯಿಂದ ಪಾತ್ರೆಯ ಮುಚ್ಚಿ ಬೇಯಿಸಬೇಕು. ನಂತರ ನೀರನ್ನು ಬಸಿಯಬೇಕು, ಆವಾಗ ಅನ್ನ ಬಿಡಿ ಬಿಡಿಯಾಗಿರುತ್ತದೆ.
ಫ್ರೈಡ್‌ರೈಸ್, ಬಿರಿಯಾನಿಗೆ ಅನ್ನ ಮಾಡುವುದಾದರೆ ನೀವು ಅನ್ನ ಬೇಯಿಸುವಾಗ 2 ಹನಿ ಎಣ್ಣೆ ಹಾಕಿ ಬೇಯಿಸಿದರೆ ಅನ್ನ ಬಿಡಿ ಬಿಡಿಯಾಗಿರುತ್ತದೆ.
ಇನ್ನು ನೀವು ಕುಕ್ಕರ್‌ನಲ್ಲಿ ಅನ್ನ ಮಾಡುವಾಗ ಎಲ್ಲಾ ಅಕ್ಕಿಯನ್ನು ಒಂದೇ ರೀತಿ ಬೇಯಿಸಲು ಸಾಧ್ಯವಿಲ್ಲ, ಕೆಲವೊಂದು ಅಕ್ಕಿಗೆ ಒಂದು ವಿಶಲ್‌ಗೆ ಅನ್ನ ರೆಡಿ, ಇನ್ನು ಕೆಲವೊಂದು ಅಕ್ಕಿಗೆ 2 ವಿಶಲ್ ಬೇಕು, ಈ ಹದ ತಿಳಿದಿದ್ದರೆ ಅನ್ನ ಬಿಡಿ ಬಿಡಿಯಾಗಿ ಬರುತ್ತದೆ.