ಕಾಸರಗೋಡು: ಬಿಲ್ಲವ ಸೇವಾಸಂಘದ ಮಹಾಸಭೆ ಕರಂದಕ್ಕಾಡು ಗುರು ಸಭಾ ಭವನದಲ್ಲಿ ಜರುಗಿತು. ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ನಡೆಯಿತು. ಸಂಘಟನೆ ಅಧ್ಯಕ್ಷ ಎ.ಕೇಶವ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಸಮಾಜದ ಏಳಿಗೆಗಾಗಿ ಸಮುದಯ ಬಾಂಧವರು ಒಗ್ಗಟ್ಟಿನಿಂದ ಕೆಲಸ ನಡೆಸಿ, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸಂಘದ ಹಿರ ಯ ಸದಸ್ಯ ರಘು ಮೀಪುಗುರಇ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರೇಮ್‍ಜಿತ್ ವರದಿ ಹಾಗೂ ಕೋಶಾಧಿಕಾರಿ ಅಶೋಕ್ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ನೂತನ ಪದಾದಿಕಾರಿಗಳ ಆಯ್ಕೆ ನಡೆಯಿತು. ಕೇಶವ ಬೀರಂತಬೈಲ್ ಗೌರವಾಧ್ಯಕ್ಷ, ರಘು ಮೀಪುಗುರಿ ಅಧ್ಯಕ್ಷ, ಸುಕೀರ್ತಿ, ಪ್ರೇಮಜಿತ್, ಹರೀಶ್ ಕೆ.ಆರ್, ಮಾಲತಿ, ಜಯಶೀಲ ಉಪಾಧ್ಯಕ್ಷರು, ಹರಿಕಾಂತ್ ಕಾಸರಗೋಡು ಪ್ರಧಾನ ಕಾರ್ಯದರ್ಶಿ, ಮೈಂದಪ್ಪ, ಕಮಲಾಕ್ಷ ಜತೆ ಕಾರ್ಯದರ್ಶಿಗಳು ಹಾಗೂ ಶಮ್ಮಿಕುಮಾರ್ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು. ಪ್ರೇಮ್‍ಜಿತ್ ಸ್ವಾಗತಿಸಿದರು. ಹರೀಶ್ ಕೆ.ಆರ್ ವಂದಿಸಿದರು.