ನವದೆಹಲಿ:ಕೊಚ್ಚಿನ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಗೆ ಅನುಮತಿಸಬೇಕು ಎಂದು ರಾಜ್ಯ ಕೈಗಾರಿಕಾ ಖಾತೆ ಸಚಿವ ಪಿ.ರಾಜೀವ್ ಒತ್ತಾಯಿಸಿದ್ದಾರೆ. ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಬಗ್ಗೆ ಮನವಿ ಮಾಡಿರುವುದಾಗಿ ಅವರು ಕೇರಳ ಹೌಸ್‍ನಲ್ಲಿ ನಿನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೋರ್ಡ್ ಆಫ್ ನ್ಯಾಷನಲ್ ಇಂಡಸ್ಟ್ರಿಯಲ್ ಕಾರಿಡಾರ್ ಡೆವಲಪ್‍ಮೆಂಟ್ ಅಂಡ್ ಇಂಪ್ಲಿಮೆಂಟೇಶನ್ ಟ್ರಸ್ಟ್ (ಎನ್.ಐ.ಸಿ.ಡಿ.ಐಟಿ) ಡಿಸೆಂಬರ್ 2022 14 ರಂದು 3815 ಕೋಟಿ ರೂ.ಗಳ ಈ ಯೋಜನೆಗೆ ಅಂಗೀಕಾರ ನೀಡಿತ್ತು. ಕೇರಳವು 1194 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಮತ್ತು ಯೋಜನೆಗಾಗಿ 1152.23 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಮತ್ತು ಕೇಂದ್ರ ಸರ್ಕಾರದಿಂದ ಅನುಕೂಲಕರ ನಿರ್ಧಾರವನ್ನು ನಿರೀಕ್ಷಿಸುತ್ತಿದೆ ಎಂದು ರಾಜೀವ್ ಹೇಳಿದರು.
ಈ ಯೋಜನೆಯನ್ನು ಕೇಂದ್ರದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ ಮತ್ತು ರಾಜ್ಯ ಕಿನ್ಪ್ರಾ ಜಂಟಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಐಬಿಎಂ ಸಹಯೋಗದೊಂದಿಗೆ ಜುಲೈ 11 ಮತ್ತು 12 ರಂದು ಕೊಚ್ಚಿಯಲ್ಲಿ ಇಂಟನ್ರ್ಯಾಷನಲ್ ಜನರೇಟಿವ್ ಎಐ ಕಾನ್ಕ್ಲೇವ್ ಆಯೋಜಿಸಲಾಗಿದೆ. ಆಗಸ್ಟ್‍ನಲ್ಲಿ ಕೊಚ್ಚಿಯಲ್ಲಿ ಅಂತಾರಾಷ್ಟ್ರೀಯ ರೊಬೊಟಿಕ್ಸ್ ರೌಂಡ್ ಟೇಬಲ್ ಅನ್ನು ಸಹ ಆಯೋಜಿಸಲಾಗುವುದು. ಜನವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು ಎಂದು ಸಚಿವ ರಾಜೀವ್ ಮಾಹಿತಿ ನೀಡಿದರು.