ಕಾಸರಗೋಡು : ಭಾರತೀಯ ಅಂಚೆ ನೌಕರರ ಒಕ್ಕೂಟ (ಬಿಪಿಇಎಫ್) ವಾರ್ಷಿಕ ಸಮ್ಮೇಳನ ನಗರಸಭಾ ಸಮ್ಮೇಳನ ಸಭಾಂಗಣದಲ್ಲಿ ಜರುಗಿತು. ಬಿಎಂಎಸ್ ಕಾಸರಗೊಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಬಾಬು ಸಮ್ಮೇಳನ ಉದ್ಘಾಟಿಸಿದರು.
ಬಿಪಿಇಎಫ್ ಕಾಸರಗೋಡು ವಿಭಾಗೀಯ ಅಧ್ಯಕ್ಷ ಪಿ.ಗಂಗಾಧರನ್ ಅಧ್ಯಕ್ಷತೆ ವಹಿಸಿದ್ದರು. ಪಿ.ಕೆ.ಶಾಜಿ ಆನಂದ್, ಕೇರಳ ಸರ್ಕಲ್ ಆಡಳಿತ ಒಕ್ಕೂಟ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್, ಸಿ.ಕೃಷ್ಣ ಕುಮಾರ್, ಬಿ.ವಾಸುದೇವ, ಕೆ.ಜಿ.ಗೋಪಾಲಕೃಷ್ಣ, ಕೆ.ದಿವಾಕರನ್, ಕೆ.ಸುರೇಂದ್ರ ಉಪಸ್ಥಿತರಿದ್ದರು. ಸಮಾರಂಭದಲ್ಲಿ ದಾಮೋದರ ಸಂಸ್ಮರಣೆ, ಎನ್.ಜಿ. ಅಭಿಜಿನಾ ಅಭಿನಂದನೆ ನಡೆಯಿತು. ಬಿಪಿಇಎಫ್ ಕಾಸರಗೋಡು ವಿಭಾಗದ ಕಾರ್ಯದರ್ಶಿ ಪಿ.ಕೆ.ಮೋಹನನ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿ.ರಂಜಿತ್ ವಂದಿಸಿದರು.