ಕಣ್ಣೂರು: ಬಿಜೆಪಿ ಕಾರ್ಯಕರ್ತರ ಮನೆಗೆ ಸಭೆಗೆ ಬಂದವರನ್ನು ತಡೆದಿದ್ದ ದೂರಿನ ಮೇರೆಗೆ ಸುಮಾರು 100 ಸಿಪಿಎಂ ಕಾರ್ಯಕರ್ತರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಯ್ಯನ್ನೂರಿನಲ್ಲಿ ಈ ಘಟನೆ ನಡೆದಿದೆ.
ಶಸ್ತ್ರಾಸ್ತ್ರ ತರಬೇತಿ ನಡೆಯುತ್ತಿದೆ ಎಂಬ ಸುಳ್ಳು ಆರೋಪದ ಮೇಲೆ ಸಿಪಿಎಂ ಕಾರ್ಯಕರ್ತರು ಮನೆ ಸುತ್ತುವರಿದಿದ್ದರು. ನಂತರ ಈ ಮನೆಯ ಆವರಣದಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿರುವುದು ಕಂಡುಬಂದಿದೆ. ಆದರೆ ಇದನ್ನು ನಂತರ ಸಿಪಿಎಂ ಕಾರ್ಯಕರ್ತರು ತಂದಿರಿಸಿದ್ದರು ಎಂದು ಬಿಜೆಪಿ ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ.
ಪಯ್ಯನ್ನೂರು ಕುಣಿಯಾನ್‍ನಲ್ಲಿರುವ ಬಿಜೆಪಿ ಕಾರ್ಯಕರ್ತ ಬಾಲನ್ ಅವರ ಮನೆಯಲ್ಲಿ ಗುರುವಾರ ರಾತ್ರಿ ಕ್ಷೇತ್ರ ಸಮಿತಿ ಸಭೆ ನಡೆಯಿತು. ಸುಮಾರು 25 ಬಿಜೆಪಿ ಕಾರ್ಯಕರ್ತರು ತಲುಪಿದ್ದರು. ಈ ವೇಳೆ ಸಿಪಿಎಂ ಕಾರ್ಯಕರ್ತರು ಆಯುಧ ತಯಾರಿಕೆ ಮತ್ತು ತರಬೇತಿ ನಡೆಯುತ್ತಿದೆ ಎಂದು ಆರೋಪಿಸಿ ಮನೆಯನ್ನು ಸುತ್ತುವರಿದಿದ್ದರು.
ಘರ್ಷಣೆ ಆರಂಭವಾಗುತ್ತಿರುವಂತೆ ಪೋಲೀಸರು ಸ್ಥಳಕ್ಕೆ ಆಗಮಿಸಿದರು. ಬಿಜೆಪಿ ಕಾರ್ಯಕರ್ತರನ್ನು ಮನೆಯಿಂದ ಹೊರಗೆ ತಂದು ಬಿಡಲಾಯಿತು. ಅತಿಕ್ರಮಣ ದೂರಿನ ಮೇರೆಗೆ ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಂದು ಬೆಳಗ್ಗೆ ಆ ಮನೆಯ ಬಳಿ ಗೋಣಿಚೀಲದಲ್ಲಿ ಕಟ್ಟಿದ್ದ ಕಬ್ಬಿಣದ ಪೈಪುಗಳು ಹಾಗೂ ಕತ್ತಿ ಪತ್ತೆಯಾಗಿದೆ.
ಆಯುಧಗಳನ್ನು ವಶಪಡಿಸಿಕೊಂಡು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ, ಆದರೆ ಯಾರ ವಿರುದ್ಧವೂ ಆರೋಪ ಹೊರಿಸಲಾಗಿಲ್ಲ.