ಬದಿಯಡ್ಕ: ಮುಳ್ಳೇರಿಯ ಮಂಡಲದ ಪೆರಡಾಲ ವಲಯ ಹವ್ಯಕ ಸಮಿತಿ ಸಭೆ ಇತ್ತೀಚೆಗೆ ಬದಿಯಡ್ಕದ ಶ್ರೀ ಭಾರತೀವಿದ್ಯಾಪೀಠದಲ್ಲಿ ನಡೆಯಿತು.
ವಲಯ ಅಧ್ಯಕ್ಷ ಶ್ರೀಹರಿ ಪೆರ್ಮುಖ ಅಧ್ಯಕ್ಷತೆ ವಹಿಸಿದ್ದರು. ವಲಯ ಕಾರ್ಯದರ್ಶಿ ವಿಷ್ಣುಪ್ರಸಾದ ಕೊಳಾರಿ ವರದಿ ಮಂಡಿಸಿದರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿದರು. ವಲಯದಲ್ಲಿ ‘ಧರ್ಮಭಾರತಿ’ ಮಾಸಿಕ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಹಾಗೂ ಮುಷ್ಠಿಭಿಕ್ಷಾ ಯೋಜನೆಯನ್ನು ಮತ್ತಷ್ಟು ಸಕ್ರಿಯಗೊಳಿಸುವಲ್ಲಿ ಎಲ್ಲರ ಸಹಕಾರವನ್ನು ಕೋರಲಾಯಿತು.
ಜೂನ್ 30ರಂದು ಮಂಡಲ ಮಟ್ಟದಲ್ಲಿ ನಡೆಯಲಿರುವ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಪದಾಧಿಕಾರಿಗಳು ಭಾಗವಹಿಸುವಂತೆ ವಿನಂತಿಸಲಾಯಿತು. ಗುರುದೃಷ್ಟಿ ಸಂಗ್ರಹ ಅಭಿಯಾನವನ್ನು ವಲಯದಲ್ಲಿ ನಡೆಸುವ ಯೋಜನೆಯನ್ನು ಕೈಗೊಳ್ಳಲಾಯಿತು. ರಾಮಾತಾರಕ ಜಪ, ಶಾಂತಿಮಂತ್ರ, ಶಂಖನಾದ ಹಾಗೂ ಧ್ವಜಾವತರಣದೊಂದಿಗೆ ಸಭೆ ಮುಕ್ತಾಯವಾಯಿತು.