ತಿರುವನಂತಪುರಂ: ಕೇರಳದಲ್ಲಿ ದೋಷರಹಿತ ಅಭ್ಯರ್ಥಿಗಳ ಆಯ್ಕೆ ಹಾಗೂ ವ್ಯವಸ್ಥಿತ ಕೆಲಸಗಳಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆ ಹೆಚ್ಚಿದೆ.
ಹಿಂದೆಂದೂ ಕಾಣದ ರೀತಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು ಎಡಪಕ್ಷಗಳ ಭದ್ರಕೋಟೆ, ಸಚಿವರ ಕ್ಷೇತ್ರಗಳಿಗೂ ಬಿಜೆಪಿ ಶಾಕ್ ನೀಡುವಲ್ಲಿ ಯಶಸ್ವಿಯಾಗಿದೆ.
ಮತಗಳಿಕೆಯಲ್ಲಿ ಸಿಪಿಎಂ ಸ್ವಲ್ಪ ಮುಂದಿದ್ದರೂ, ಕೇರಳದ ಆಡಳಿತ ಪಕ್ಷ ಮತ್ತು ಬಿಜೆಪಿ ತಲಾ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಇದೀಗ ಸಮಾನ ಸ್ಥಾನದಲ್ಲಿದೆ. ಸಿಪಿಎಂ ಮತ್ತು ಅದರ ಘಟಕ ಪಕ್ಷಗಳು ಕೇರಳದಲ್ಲಿ ತಮ್ಮ ಅಭ್ಯರ್ಥಿಗಳನ್ನು ಮೊದಲು ಘೋಷಿಸಿದವು. ಆದರೆ ಫಲಿತಾಂಶ ಬಂದಾಗ ಎನ್‍ಡಿಎ ಅಭ್ಯರ್ಥಿಗಳಿಗಿಂತ ಕಳಪೆ ಪ್ರದರ್ಶನ ಕಂಡಿರುವರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ ಹಲವು ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಚುನಾವಣಾ ಗೆಲುವು ಕೇರಳದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮೋದಿ ಅಲೆ ಬಂದಿದೆ ಎಂಬುದು ಮನವರಿಕೆಯಾಗಿದೆ. ಅಲ್ಪಸಂಖ್ಯಾತರ ಮತಗಳನ್ನು ಗಿಟ್ಟಿಸಿಕೊಳ್ಳಲು ಎರಡೂ ರಂಗಗಳು ಪೈಪೋಟಿ ನಡೆಸಿದಾಗ ಹಿಂದೆಂದೂ ಕಾಣದ ರೀತಿಯಲ್ಲಿ ಕೇರಳದ ಮತದಾರರ ಮನದಲ್ಲಿ ಸ್ಥಾನ ಪಡೆಯಲು ಎನ್ ಡಿಎ ಅಭ್ಯರ್ಥಿಗಳಿಗೆ ಸಾಧ್ಯವಾಗಿದೆ. ರಾಜಧಾನಿ ಜಿಲ್ಲೆಯಲ್ಲಿ ಇಬ್ಬರು ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ಅಟ್ಟಿಂಗಲ್ ನಲ್ಲಿ ವಿ.ಮುರಳೀಧರನ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಪ್ರಚಾರ ಆರಂಭಿಸಿತ್ತು.
ಕಳೆದ ಚುನಾವಣೆಯಲ್ಲಿ 1 ಲಕ್ಷದ ಸಮೀಪದಲ್ಲಿದ್ದ ತರೂರ್ ಅವರ ಬಹುಮತ 16,000ಕ್ಕೆ ಕುಸಿದಿತ್ತು. ಎಡಪಕ್ಷಗಳು ಒಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ರಾಜೀವ್ ಚಂದ್ರಶೇಖರ್ 3,42,078 ಮತಗಳನ್ನು ಪಡೆದಿದ್ದಾರೆ.
ಅಟ್ಟಿಂಗಲ್ ಕೇಂದ್ರ ಸಚಿವ ವಿ. ಮುರಳೀಧರನ್ ಅವರನ್ನು ಕಣದಲ್ಲಿದ್ದದ್ದರಿಂದ ಹಾಲಿ ಸಂಸದ ಅಡೂರ್ ಪ್ರಕಾಶ್ ಮತ್ತು ಎಲ್ ಡಿಎಫ್ ಅಭ್ಯರ್ಥಿ ವಿ. ಜೋಯಿ ಸಾಕಷ್ಟು ಬೆವರು ಹರಿಸಬೇಕಾಯಿತು. ಮುರಳೀಧರನ್ ಅವರ ಪ್ರಗತಿಯು ಪೋಟೋ ಫಿನಿಶ್‍ಗೆ ಫಲಿತಾಂಶಗಳನ್ನು ತರಲು ಸಾಧ್ಯವಾಯಿತು. ಮುರಳೀಧರನ್ 3,11,779 ಮತಗಳನ್ನು ಪಡೆದು ಎಡಪಕ್ಷಗಳ ಭದ್ರಕೋಟೆ ಬೆಚ್ಚಿಬೀಳಿಸಿದ್ದಾರೆ.
ತ್ರಿಶೂರ್‍ನಲ್ಲಿ ಅಭ್ಯರ್ಥಿ ಆಯ್ಕೆ ಹತ್ತಾರು ಪಟ್ಟು ಬದಲಾವಣೆಗೆ ನಾಂದಿಹಾಡಿತು. ಕೇವಲ ಎಡ ಶಾಸಕರನ್ನು ಹೊಂದಿರುವ ತ್ರಿಶೂರ್ ಜಿಲ್ಲೆಯಲ್ಲಿ ಸುರೇಶ್ ಗೋಪಿ 4,12,338 ಮತಗಳನ್ನು ಗಳಿಸಿ ತಮ್ಮ ಮತಗಳನ್ನು ಶೇ.37.8ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಕೇರಳದ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೊನೆಯದಾಗಿ ವಯನಾಡಿನಿಂದ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಆಲಪ್ಪುಳದಲ್ಲಿ ಸ್ಪರ್ಧಿಸಿದ್ದ ಶೋಭಾ ಸುರೇಂದ್ರನ್ ಮತ್ತು ಆಲತ್ತೂರಿನಲ್ಲಿ ಸ್ಪರ್ಧಿಸಿದ್ದ ಡಾ. ಸರಸು ಕೂಡ ಅತ್ಯುತ್ತಮ ಮತ ಗಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
5 ಲಕ್ಷಕ್ಕಿಂತ ಹೆಚ್ಚು ಬಹುಮತ ನಿರೀಕ್ಷೆಯಲಿದ್ದ ರಾಹುಲ್ ಗಾಂಧಿ ಅವರಿಗೆ ಗಂಭೀರ ಪೈಪೋಟಿಯನ್ನು ಸುರೇಂದ್ರನ್ ನೀಡಿದ್ದಾರೆ. ಸುರೇಂದ್ರನ್ ಅವರು ಹೈ-ರೇಂಜ್ ಪ್ರದೇಶದಲ್ಲಿ ಎನ್‍ಡಿಎ ಮತ ಪಾಲನ್ನು ಶೇ.13ಕ್ಕೆ ಹೆಚ್ಚಿಸಿರುವರು. ಶೋಭಾ ಸುರೇಂದ್ರನ್ ಅವರು 2,99,648 ಮತಗಳನ್ನು ಪಡೆದು ಶೇ.28.3ರಷ್ಟು ಮತಗಳಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸಿಪಿಎಂನ ಹಾಲಿ ಸಂಸದರಾಗಿದ್ದ ಆರಿಫ್ ಅವರು ಸೋತಿದ್ದಲ್ಲದೆ, ಎಡಪಕ್ಷಗಳ ಕೆಂಪು ಕೋಟೆಗಳನ್ನು ಬಿಜೆಪಿಗೆ ಹತ್ತಿರ ತರುವಲ್ಲಿ ಯಶಸ್ವಿಯಾದರು. ಆಲತ್ತೂರಿನಲ್ಲಿ 1,88,230 ಮತಗಳನ್ನು ಪಡೆಯುವ ಮೂಲಕ ಎನ್‍ಡಿಎ ಶೇ.18.94ರಷ್ಟು ಮತಗಳಿಸಿದೆ.
ಮುಖ್ಯಮಂತ್ರಿಗಳ ಕ್ಷೇತ್ರವಾದ ಕಣ್ಣೂರಿನಲ್ಲಿ ಬಿಜೆಪಿ ಅನಿರೀಕ್ಷಿತ ಪ್ರವೇಶ ಮಾಡಿದೆ. ಮುಖ್ಯಮಂತ್ರಿ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದ ಅವರ ಕ್ಷೇತ್ರವೂ ಎಲ್ ಡಿಎಫ್ ತೊರೆಯಲು ಬಿಜೆಪಿಯೇ ಪ್ರಮುಖ ಕಾರಣ. ರಘುನಾಥ್ ಅವರನ್ನು ಕ್ಷೇತ್ರಕ್ಕೆ ಕರೆತರಲಾಯಿತು. ಪಿಣರಾಯಿ ವಿಜಯನ್ ಅವರ ಭದ್ರಕೋಟೆಯಲ್ಲಿ ಎನ್‍ಡಿಎ 11.27 ರಷ್ಟು ಮತಗಳನ್ನು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.