ಕೊಟ್ಟಾಯಂ: ಕೇರಳದ ಅಭಿವೃದ್ಧಿಗೆ ಎಲ್ಲರೊಂದಿಗೆ ಮುಂದೆ ಸಾಗುವುದಾಗಿ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಹೇಳಿದ್ದಾರೆ.
ಅಭಿವೃದ್ಧಿ ವಿಷಯಗಳ ಬಗ್ಗೆ ಸಂಬಂಧಪಟ್ಟವರು ಹಾಗೂ ಇತರರೊಂದಿಗೆ ಮಾತನಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬಂಡವಾಳ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಮೀನುಗಾರರು ಮತ್ತು ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗುವುದು. ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಯೋಜನಾ ದಾಖಲೆಯನ್ನೂ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕೇರಳಕ್ಕೆ ಆಗಮಿಸಿದಾಗ ನಡೆದ ಸ್ವಾಗತದ ವೇಳೆ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಕೇಂದ್ರ ಸಚಿವರಾದ ನಂತರ ಅವರು ಸದಸ್ಯರಾಗಿರುವ ಕಂಕಾರಿ ನಂಬಿಯಾಕುಳಂ ಸೇಂಟ್. ಥಾಮಸ್ ಚರ್ಚ್ ತಲುಪಿ ಪ್ರಾರ್ಥನೆ ಸಲ್ಲಿಸಿ, ಪ್ರತಿಜ್ಞೆ ಮಾಡಿ, ತಮ್ಮ ತಂದೆಯ ಸಮಾಧಿಗೆ ಪುμÁ್ಪರ್ಚನೆ ಮಾಡಿ ಕಾರ್ಯಕರ್ತರನ್ನು ಅಭಿನಂದಿಸಿದರು. ಪತ್ನಿ ಅನ್ನಮ್ಮ ಕೂಡ ಜೊತೆಗಿದ್ದರು. ಬಳಿಕ ಕೇಂದ್ರ ಸಚಿವರಿಗೆ ಸ್ಥಳೀಯರು, ಬಂಧುಗಳು ಅಭಿನಂದನೆ ಸಲ್ಲಿಸಿದರು. ಪ್ಯಾರಿಷ್ ಪಾದ್ರಿ ಮತ್ತು ಇತರ ಚರ್ಚ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಾರ್ಜ್ ಕುರಿಯನ್ ಅವರು ಆರ್‍ಎಸ್‍ಎಸ್ ಕಚೇರಿ ಮತ್ತು ಬಿಜೆಪಿ ಕಚೇರಿಯಲ್ಲಿ ಮುಖಂಡರನ್ನು ಭೇಟಿಯಾದ ನಂತರ ಸಮ್ಮೇಳನದಲ್ಲಿ ಭಾಗವಹಿಸಲು ಕೊಟ್ಟಾಯಂಗೆ ತೆರಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಬರಮಾಡಿಕೊಂಡರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಮುಂದಿನ ಅರ್ಧ ಶತಮಾನದ ಕೇರಳದ ಬದಲಾವಣೆಯ ಸಂಕೇತವಾಗಿದೆ ಎಂದರು.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಜಾರ್ಜ್ ಕುರಿಯನ್ ಅವರನ್ನು ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಕೆ.ಎಸ್. ರಾಧಾಕೃಷ್ಣನ್, ರಾಜ್ಯ ಕಾರ್ಯದರ್ಶಿ ಡಾ. ರೇಣು ಸುರೇಶ್, ರಾಜ್ಯ ವಕ್ತಾರ ಅಡ್ವ. ಟಿ.ಪಿ.ಸಿಂಧುಮೋಳ್, ಜಿಲ್ಲಾಧ್ಯಕ್ಷ ಅಡ್ವ. ಕೆ.ಎಸ್. ಶೈಜು, ರಾಷ್ಟ್ರೀಯ ಕೌನ್ಸಿಲರ್ ಪಿ.ಎಂ. ವೇಲಾಯುಧನ್, ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಡ್ವ. ನೋಬಲ್ ಮ್ಯಾಥ್ಯೂ ಹಾಗೂ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಿಲ್ ದಿನೇಶ್ ಉಪಸ್ಥಿತರಿದ್ದರು.