ನವದೆಹಲಿ: ಸಂಸತ್ತಿನ ಆವರಣದ ಮುಂಭಾಗದಲ್ಲಿದ್ದ ಮಹಾತ್ಮಗಾಂಧಿ, ಬಿ.ಆರ್.ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಸೇರಿದಂತೆ ಇತರರ ಪ್ರತಿಮೆಗಳನ್ನು ಸಂಸತ್ತಿನ ಪುನರಾಭಿವೃದ್ಧಿ ಯೋಜನೆ ಭಾಗವಾಗಿ ಸ್ಥಳಾಂತರಿಸಲಾಗಿದ್ದು ಈ ಕ್ರಮವನ್ನು ಕಾಂಗ್ರೆಸ್ ಖಂಡಿಸಿದೆ.
ನವದೆಹಲಿ: ಸಂಸತ್ತಿನ ಆವರಣದ ಮುಂಭಾಗದಲ್ಲಿದ್ದ ಮಹಾತ್ಮಗಾಂಧಿ, ಬಿ.ಆರ್.ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಸೇರಿದಂತೆ ಇತರರ ಪ್ರತಿಮೆಗಳನ್ನು ಸಂಸತ್ತಿನ ಪುನರಾಭಿವೃದ್ಧಿ ಯೋಜನೆ ಭಾಗವಾಗಿ ಸ್ಥಳಾಂತರಿಸಲಾಗಿದ್ದು ಈ ಕ್ರಮವನ್ನು ಕಾಂಗ್ರೆಸ್ ಖಂಡಿಸಿದೆ.
ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಮತ್ತು ಮಹಾರಾಣಾ ಪ್ರತಾಪ್ ಅವರ ಪ್ರತಿಮೆಗಳನ್ನು ಹಳೆಯ ಸಂಸತ್ತಿನ ಕಟ್ಟಡ ಮತ್ತು ಸಂಸತ್ತಿನ ಗ್ರಂಥಾಲಯದ ನಡುವಿನ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸಂಸತ್ ಭವನದ ಪ್ರಮುಖ ಸ್ಥಳಗಳಿಂದ ಛತ್ರಪತಿ ಶಿವಾಜಿ, ಮಹಾತ್ಮಗಾಂಧಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ತೆಗೆದುಹಾಕಲಾಗಿದೆ. ಇದು ಅಮಾನುಷ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಮತದಾರರು ಬಿಜೆಪಿಗೆ ಮತ ಹಾಕಿಲ್ಲ. ಆದ್ದರಿಂದ ಶಿವಾಜಿ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸಂಸತ್ತಿನ ಮೂಲ ಸ್ಥಳದಿಂದ ತೆಗೆದುಹಾಕಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ವಾಗ್ದಾಳಿ ನಡೆಸಿದರು.
ಹೊಸದಾಗಿ ಆಯ್ಕೆಯಾದ ಸಂಸದರ ಮೊದಲ ಅಧಿವೇಶನಕ್ಕಾಗಿ ಸಂಕೀರ್ಣವನ್ನು ನವೀಕರಿಸಲು ಸಂಸತ್ತಿನಲ್ಲಿ ಪುನರಾಭಿವೃದ್ಧಿ ಯೋಜನೆಯನ್ನು ಆರಂಭಿಸಲಾಗಿದೆ. ನಾಲ್ಕು ಪ್ರತ್ಯೇಕ ಕಟ್ಟಡಗಳನ್ನು ಒಳಗೊಂಡಿರುವ ಸಂಪೂರ್ಣ ಸಂಕೀರ್ಣವನ್ನು ಏಕೀಕರಿಸುವ ಕೆಲಸ ನಡೆಯುತ್ತಿದ್ದು, ಜೂನ್‌ನಲ್ಲಿ ಸಂಸತ್ತಿಗೆ ಹೊಸ ರೂಪ ನೀಡಲಾಗುವುದು. ಸಂಸತ್ತಿನ ಹೊರ ಪ್ರದೇಶಗಳ ಪುನರಾಭಿವೃದ್ಧಿಯ ಭಾಗವಾಗಿ ಮಹಾತ್ಮ ಗಾಂಧಿ, ಶಿವಾಜಿ ಮತ್ತು ಜ್ಯೋತಿಬಾ ಫುಲೆ ಸೇರಿ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ. ಇದನ್ನು ಸಂವಿಧಾನ ಭವನ ಎಂದು ಹೆಸರಿಸಲಾಗಿದೆ ಎಂದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.