ಮುಂಬೈ: ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೊ ವಿಮಾನವೊಂದಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿತ್ತು. ಆದರೆ ವಿಮಾನವು ಸುರಕ್ಷಿತವಾಗಿ ಮುಂಬೈ ತಲುಪಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಮುಂಬೈ: ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೊ ವಿಮಾನವೊಂದಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿತ್ತು. ಆದರೆ ವಿಮಾನವು ಸುರಕ್ಷಿತವಾಗಿ ಮುಂಬೈ ತಲುಪಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ದೆಹಲಿಯ ಖಾಸಗಿ ಏರ್‌ಲೈನ್ಸ್‌ನ ಕಾಲ್ ಸೆಂಟರ್‌ವೊಂದಕ್ಕೆ ಬಾಂಬ್ ಬೆದರಿಕೆಯ ಸಂದೇಶ ಬಂದಿತ್ತು.
ಇಂಡಿಗೊ ವಿಮಾನ 6E 5149 ಚೆನ್ನೈನಿಂದ ಮುಂಬೈಗೆ ತೆರಳಿತ್ತು. ಈ ಮಧ್ಯೆ ಬೆದರಿಕೆಯ ಕರೆ ಬಂದ ಬಳಿಕವೂ ವಿಮಾನವು ನಿನ್ನೆ ತಡರಾತ್ರಿ ಸುರಕ್ಷಿತವಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ನಂತರ ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಯಿತು. ಭದ್ರತೆಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಮತ್ತೆ ವಿಮಾನವು ಟರ್ಮಿನಲ್ ಪ್ರದೇಶಕ್ಕೆ ವಾಪಾಸ್ಸಾಗುತ್ತದೆ ಎಂದು ಹೇಳಿದೆ.
exhumedyou888@gmail.com ಇ- ಮೇಲ್ ಐಡಿಯಿಂದ ಮಧ್ಯಾಹ್ನ 12.40 ಸುಮಾರಿಗೆ ಬೆದರಿಕೆ ಸಂದೇಶವನ್ನು ಸ್ವೀಕರಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಪುನಃ ಪರಿಶೀಲಿಸಲಾಯಿತು. ವಾರಾಣಸಿ, ಚೆನ್ನೈ, ಪಟ್ನಾ, ನಾಗ್ಪುರ, ಜೈಪುರ, ವಡೋದರಾ, ಕೊಯಮತ್ತೂರು ಮತ್ತು ಜಬಲ್‌ಪುರ ವಿಮಾನ ನಿಲ್ದಾಣಗಳು ಬೆದರಿಕೆಯ ಸಂದೇಶಗಳನ್ನು ಸ್ವೀಕರಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.